ಜ.30ಕ್ಕೆ ಕಾನೂನು ಸಚಿವ ಜೆ.ಸಿ. ಮಧುಸ್ವಾಮಿ ಉಡುಪಿ ಪ್ರವಾಸ

ಉಡುಪಿ: ರಾಜ್ಯದ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ ಮಾಧುಸ್ವಾಮಿ ಜನವರಿ 30 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅಂದು ಬೆಳಗ್ಗೆ 10.30 ಕ್ಕೆ ನಗರದ ಆದರ್ಶ ಆಸ್ಪತ್ರೆಯ ನರ್ಸಿಂಗ್ ಕಾಲೇಜಿನ ಉದ್ಘಾಟನಾ ಕಾರ್ಯಕ್ರಮ, ಮಧ್ಯಾಹ್ನ 12 ಗಂಟೆಗೆ ಹೆಬ್ರಿ ತಾಲೂಕು ಶಿವಪುರ ಗ್ರಾಮದ ದೇವಸ್ಥಾನ ಬೆಟ್ಟ ಎಂಬಲ್ಲಿ ಕಾರ್ಕಳ- ಉಡುಪಿ ಉಪವಿಭಾಗದ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಯ ಉದ್ಘಾಟನೆ ನೆರವೇರಿಸಿ, ನಂತರ ತುಮಕೂರಿಗೆ ತೆರಳಲಿರುವರು.