ಭೂಕುಸಿತದಿಂದ ಜಮ್ಮು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಲ್ವರು ಸಾವು

ಜಮ್ಮು ಮತ್ತು ಕಾಶ್ಮೀರ: ಇಲ್ಲಿನರಾಂಬನ್​ ಜಿಲ್ಲೆಯ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು (ಮಂಗಳವಾರ) ಭೂಕುಸಿತ ಸಂಭವಿಸಿತು. ಪರಿಣಾಮ ಟ್ರಕ್‌ನಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ. ಆಗಸ್ಟ್​ನಲ್ಲೂ ಸಂಭವಿಸಿತ್ತು ಗುಡ್ಡಕುಸಿತ: ಜಮ್ಮು ಮತ್ತು ಕಾಶ್ಮೀರದ ರಾಂಬನ್​ ಪ್ರದೇಶದಲ್ಲಿ ಆಗಸ್ಟ್ 6ರಂದು ಗುಡ್ಡ ಕುಸಿತವಾಗಿತ್ತು. ಅಪಾರ ಪ್ರಮಾಣದ ಮಣ್ಣು ರಸ್ತೆ ಮೇಲೆ ಬೀಳುತ್ತಿರುವ ದೃಶ್ಯಗಳನ್ನು ಮೊಬೈಲ್​ನಲ್ಲಿ ಪ್ರಯಾಣಿಕರು ಸೆರೆಹಿಡಿದಿದ್ದರು. ರಸ್ತೆ ಸಂಪೂರ್ಣ ಬಂದ್​ ಆಗಿತ್ತು. ಯಾವುದೇ ಪ್ರಾಣಹಾನಿಯಾಗಿರಲಿಲ್ಲ. ಜುಲೈ ತಿಂಗಳಲ್ಲೂ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-44ರಲ್ಲಿ ಭಾರಿ ಮಳೆಯಿಂದಾಗಿ ಗುಡ್ಡದಿಂದ ಕಲ್ಲು, ಮಣ್ಣು ರಸ್ತೆ […]