ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಪ್ರವೇಶಿಸಿದ ಜಮ್ಮು-ಕಾಶ್ಮೀರದ ಟುಲಿಪ್ ಗಾರ್ಡನ್ !!

ಜಮ್ಮು ಮತ್ತು ಕಾಶ್ಮೀರ: ಶ್ರೀನಗರದಲ್ಲಿರುವ ಇಂದಿರಾಗಾಂಧಿ ಸ್ಮಾರಕ ಟುಲಿಪ್ ಗಾರ್ಡನ್ ಏಷ್ಯಾದ ಅತಿದೊಡ್ಡ ಉದ್ಯಾನವನವಾಗಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ (ಲಂಡನ್) ಅನ್ನು ಪ್ರವೇಶಿಸಿದೆ. ಉದ್ಯಾನವನ್ನು 68 ವಿಭಿನ್ನ ಪ್ರಭೇದಗಳ ಸಮೂಹದಿಂದ 1.5 ಮಿಲಿಯನ್ ಟುಲಿಪ್ ಬಲ್ಬ್‌ಗಳಿಂದ ಅಲಂಕರಿಸಲಾಗಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಒಂದು ಲಕ್ಷ ಪ್ರವಾಸಿಗರು ಸುಂದರವಾದ ಉದ್ಯಾನಕ್ಕೆ ಭೇಟಿ ನೀಡಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಟುಲಿಪ್ ಉದ್ಯಾನವು ಶ್ರೀನಗರದ ದಾಲ್ ಸರೋವರ ಮತ್ತು ಜಬರ್ವಾನ್ ಬೆಟ್ಟಗಳ ನಡುವೆ […]
ಕಾಶ್ಮೀರದ ನಿವೃತ್ತ ನ್ಯಾಯಮೂರ್ತಿ ನೀಲಕಂಠ ಗಂಜೂ ಹತ್ಯೆ ಪ್ರಕರಣದ ಮರು ತನಿಖೆ

ಶ್ರೀನಗರ: ಮೂರು ದಶಕಗಳ ಹಿಂದೆ ನಿವೃತ್ತ ನ್ಯಾಯಮೂರ್ತಿ ನೀಲಕಂಠ ಗಂಜೂ ಅವರ ಹತ್ಯೆಯ ಹಿಂದಿನ ದೊಡ್ಡ ಕ್ರಿಮಿನಲ್ ಪಿತೂರಿಯನ್ನು ಬಯಲಿಗೆಳೆಯುವ ಸಲುವಾಗಿ ರಾಜ್ಯ ತನಿಖಾ ಸಂಸ್ಥೆ (ಎಸ್‌ಐಎ), ಈ ಕೊಲೆ ಪ್ರಕರಣದ ಸತ್ಯ ಅಥವಾ ಸಂದರ್ಭಗಳ ಪರಿಚಯವಿರುವ ಎಲ್ಲ ವ್ಯಕ್ತಿಗಳಿಗೆ ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದೆ. ತತ್‌ಕ್ಷಣದ ಪ್ರಕರಣದ ತನಿಖೆಯ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರಭಾವ ಬೀರುವ ಘಟನೆಗಳ ಯಾವುದೇ ವಿವರಗಳನ್ನು ಹಂಚಿಕೊಳ್ಳಲು ಮುಂದೆ ಬರುವಂತೆ ಹೇಳಿದೆ. ಅಂತಹ ಎಲ್ಲಾ ವ್ಯಕ್ತಿಗಳ ಗುರುತನ್ನು ಸಂಪೂರ್ಣವಾಗಿ […]
ಪ್ರಸಿದ್ಧ ದಾಲ್ ಸರೋವರದಲ್ಲಿ ‘ಫ್ಲೋಟಿಂಗ್ ಸ್ಪೇಸ್’ ಸ್ಟೋರ್ ಪ್ರಾರಂಭಿಸಿದ ಅಮೆಜಾನ್ ಇಂಡಿಯಾ

ಶ್ರೀನಗರ: ಅಮೆಜಾನ್ ಇಂಡಿಯಾ ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ನಗರದ ಪ್ರಸಿದ್ಧ ದಾಲ್ ಸರೋವರದಲ್ಲಿ ತನ್ನ ಮೊದಲ ‘ಫ್ಲೋಟಿಂಗ್ ಸ್ಪೇಸ್’ ಸ್ಟೋರ್ ಅನ್ನು ಘೋಷಿಸಿದೆ. ದೈತ್ಯ ಇ ಕಾಮರ್ಸ್ ಕಂಪನಿ ಅಮೆಜಾನ್ ಇಂಡಿಯಾ ಪತ್ರಿಕಾ ಹೇಳಿಕೆಯಲ್ಲಿ ನಾವು ಇಂದು ಶ್ರೀನಗರದ ದಾಲ್ ಸರೋವರದಲ್ಲಿ ನಮ್ಮ ಮೊದಲ ತೇಲುವ ‘ಐ ಹ್ಯಾವ್ ಸ್ಪೇಸ್’ ಮಳಿಗೆಯನ್ನು ಸ್ಥಾಪಿಸುವುದಾಗಿ ಘೋಷಿಸಿದ್ದೇವೆ. ‘ಐ ಹ್ಯಾವ್ ಸ್ಪೇಸ್’ ಸ್ಟೋರ್ ತನ್ನ ಗ್ರಾಹಕರಿಗೆ ವಿಶ್ವಾಸಾರ್ಹ ಮತ್ತು ಅನುಕೂಲಕರ ವಿತರಣಾ ಅನುಭವವನ್ನು ಒದಗಿಸುವ ಮತ್ತು ಹೆಚ್ಚುವರಿ […]
ಭಾರತ-ಪಾಕ್ ನಿಯಂತ್ರಣ ರೇಖೆಯ ತೀತ್ವಾಲ್ ನಲ್ಲಿ ತಾಯಿ ಶಾರದಾಂಬೆಗೆ ಪ್ರಾಣ ಪ್ರತಿಷ್ಠೆ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಭಕ್ತರು

ಜಮ್ಮು ಮತ್ತು ಕಾಶ್ಮೀರ: ಇಲ್ಲಿನ ತೀತ್ವಾಲ್ ನಲ್ಲಿ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿ ಜೂ.5ರಂದು ಶ್ರೀ ಶಾರದಾಂಬೆ ವಿಗ್ರಹವನ್ನು ವೇದ ಮಂತ್ರ ಘೋಷಗಳೊಂದಿಗೆ ವಿಧಿವತ್ತಾಗಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ನಡೆಸಿದರು. ಕಳೆದ ಮಾ.22ರಂದು ಕಾಶ್ಮೀರಿ ಪಂಡಿತರು ಶೃಂಗೇರಿಯಿಂದ ಕೊಂಡೊಯ್ದ ಪಂಚಲೋಹದ ವಿಗ್ರಹವನ್ನು ಜಮ್ಮು ಮತ್ತು ಕಾಶ್ಮೀರದ ತೀತ್ವಾಲ್‌ನಲ್ಲಿ ಪ್ರತಿಷ್ಠಾಪಿಸಿದ್ದರು. ಇದೀಗ ಶ್ರೀ ಶಾರದಾ ಪೀಠದ ಜಗದ್ಗುರುಗಳು ಕಾಶ್ಮೀರದ ತೀತ್ವಾಲ್ ಗೆ ತೆರಳಿ ಪೂಜೆ ಸಲ್ಲಿಸಿ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದ್ದಾರೆ. ಭಾರತ-ಪಾಕಿಸ್ಥಾನ ನಿಯಂತ್ರಣ ರೇಖೆಯ ಕುಪ್ವಾರ […]
ಪ್ರಪ್ರಥಮ ಜಿ-20 ಸಭೆಗೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ ಭೂಲೋಕದ ಸ್ವರ್ಗ ಜಮ್ಮು ಮತ್ತು ಕಾಶ್ಮೀರ

ಶ್ರೀನಗರ: ಬಿಗಿ ಭದ್ರತೆಯ ನಡುವೆ ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಇಂದಿನಿಂದ ಜಿ-20 ದೇಶಗಳ ಮೂರನೇ ಪ್ರವಾಸೋದ್ಯಮ ಕಾರ್ಯ ಗುಂಪು ಸಭೆಯನ್ನು ಆಯೋಜಿಸಲಿದೆ. ಕೇಂದ್ರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡ ನಂತರ ಮತ್ತು ಆಗಸ್ಟ್ 2019 ರಲ್ಲಿ ರಾಜ್ಯತ್ವವನ್ನು ತೆಗೆದುಹಾಕಿದ ನಂತರ ಈ ಪ್ರದೇಶದಲ್ಲಿ ನಡೆಯುವ ಮೊದಲ ಅಂತರರಾಷ್ಟ್ರೀಯ ಕಾರ್ಯಕ್ರಮ ಇದಾಗಿದೆ. ಶ್ರೀನಗರ ನಗರದ ಕೆಲವು ಭಾಗಗಳು ಮತ್ತು ಜಿ- 20 ನಡೆಯಲಿರುವ ಶೇರ್-ಎ-ಕಾಶ್ಮೀರ್ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ಗೆ ಹೋಗುವ ರಸ್ತೆಗಳನ್ನು ಅತ್ಯಾಧಿನಿಕವಾಗಿ […]