ಉಡುಪಿಯಲ್ಲಿ ಹಲಸಿನ ಮೇಳ: ಎಂಥಾ ಸೊಗಸು ಹಲಸಿನ ತಿನಿಸು ಎಂದ ಹಲಸು ಪ್ರಿಯರು
ಉಡುಪಿ: ದೊಡ್ಡಣಗುಡ್ಡೆ ಶಿವಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಜಿಲ್ಲಾ ಕೃಷಿಕ ಸಮಾಜ ವತಿಯಿಂದ ನಡೆದ ಹಲಸು ಮೇಳಕ್ಕೆ ಭರ್ಜರಿ ಓಪನಿಂಗ್ ದೊರೆತಿದೆ.ಹಲಸಿನ್ ವಿವಿಧ ಖಾದ್ಯಗಳಾದ ಹಲಸಿನ ಪಾಯಸ, ಕಬಾಬ್, ಮುಳ್ಳ, ಚಟ್ಟಂಬಡೆ, ಮಾಂಬಳ, ಹಪ್ಪಳ, ಸಂಡಿಗೆ, ಬಿಸಿ ಬಿಸಿಯಾಗಿ ಅಲ್ಲೇ ತಟ್ಟಿ ಕಾಯಿಸಿಕೊಡುವ ಹಲಸಿನ ಹೋಳಿಗೆ, ಹೀಗೆ ಬಾಯಿ ಚಪ್ಪರಿಸುವಂತಹ ವೈವಿಧ್ಯಮಯ ಹಲಸಿನ ಖಾದ್ಯಗಳು ಅಲ್ಲಿತ್ತು. ಸುಮಾರು 24ಕ್ಕೂ ಅಧಿಕ ಮಳಿಗೆಗಳು ತೆರೆದುಕೊಳ್ಳುತ್ತಿತ್ತು. ಪ್ರತಿಯೊಂದು ಮಳಿಗೆಗಳಲ್ಲೂ ಭಿನ್ನವಾದ ವಸ್ತುಗಳು. ಹಲಸಿನ ಖಾದ್ಯಗಳು […]