ಯಾವುದೇ ಶ್ರಮ ಪಡದವರಿಗೂ, ಕಠಿಣ ಶ್ರಮ ಪಡುವವರಿಗೂ ಒಂದೇ ಅನುದಾನ ಸರಿಯಲ್ಲ
ಉಡುಪಿ: ಸರಕಾರ ಯಾವುದೇ ಶ್ರಮಪಡದೆ ಆರಾಮಾಗಿ ಎಸಿ ಕೊಠಡಿಯಲ್ಲಿ ಕುಳಿತು ಬರೆಯುವವರ ಸಾಹಿತ್ಯ ಅಕಾಡೆಮಿಗೂ 1 ಕೋಟಿ ರೂ. ಹಾಗೂ ಊರೂರು ಅಲೆದಾಟ ನಡೆಸಿ ಹಗಲಿರುಳು ದುಡಿಯುವ ನಾಟಕ ಅಕಾಡೆಮಿಗೂ ಅಷ್ಟೇ ವಾರ್ಷಿಕ ಅನುದಾನ ನೀಡುತ್ತಿದೆ. ಇದು ಸರಿಯದ ಕ್ರಮ ಅಲ್ಲ ಎಂದು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಜೆ.ಲೋಕೇಶ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ನಾಟಕ ಅಕಾಡೆಮಿಗೆ ನೀಡುವ 1 ಕೋಟಿ ಅನುದಾನ ಯಾವುದಕ್ಕೂ ಸಾಲುವುದಿಲ್ಲ. ಸಿಬ್ಬಂದಿಗಳಿಗೆ ವೇತನ ನೀಡಲು 35 ಲಕ್ಷ ಖರ್ಚಾದರೆ, ಉಳಿದ […]