ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೊ ಬೆರ್ಲುಸ್ಕೋನಿ ವಿಧಿವಶ
ರೋಮ್ : ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೊ ಬೆರ್ಲುಸ್ಕೋನಿ ಮಿಲಾನ್ನ ಸ್ಯಾನ್ ರಾಫೆಲ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಏಪ್ರಿಲ್‌ನಲ್ಲಿ ದೀರ್ಘಕಾಲದ ಲ್ಯುಕೇಮಿಯಾ ಪ್ರಕರಣಕ್ಕೆ ಸಂಬಂಧಿಸಿದ ಶ್ವಾಸಕೋಶದ ಸೋಂಕಿಗೆ ಬೆರ್ಲುಸ್ಕೋನಿ ಚಿಕಿತ್ಸೆ ಪಡೆದಿದ್ದಾರೆ ಎಂದು ಇಟಲಿಯ ಮಾಧ್ಯಮ ವರದಿಗಳು ತಿಳಿಸಿವೆ. ಪ್ರಖ್ಯಾತ ಬಿಲಿಯನೇರ್ ಮಾಧ್ಯಮ ಉದ್ಯಮಿ ಬರ್ಲುಸ್ಕೋನಿ 1994 ರಲ್ಲಿ ಪ್ರಥಮ ಬಾರಿಗೆ ಅಧಿಕಾರಕ್ಕೆ ಬಂದರು ಮತ್ತು 2011 ರವರೆಗೆ ನಾಲ್ಕು ಬಾರಿ ಪ್ರಧಾನಿಯಾಗಿದ್ದರು. .ಸಿಲ್ವಿಯೊ ಬೆರ್ಲುಸ್ಕೋನಿ ಮಿಲಾನ್ನಲ್ಲಿ 29 ಸೆಪ್ಟೆಂಬರ್ 1936 ರಂದು […]