ಇಸ್ರೋ ಎಸ್‌ಎಸ್‌ಎಲ್‌ವಿ ಉದ್ಯಮ ವರ್ಗಾವಣೆಗೆ ಘೋಷಣೆ
ನವದೆಹಲಿ: ಎಸ್‌ಎಸ್‌ಎಲ್‌ವಿ ಇಸ್ರೋ ಅಭಿವೃದ್ಧಿಪಡಿಸಿದ ಆರನೇ ಉಡಾವಣಾ ವಾಹಕವಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಮತ್ತು ಈ ವರ್ಷದ ಫೆಬ್ರವರಿಯಲ್ಲಿ ಎರಡು ಅಭಿವೃದ್ಧಿ ಪಡಿಸಲಾದ ವಾಹಕಗಳು ಹಾರಾಟ ನಡೆಸಿವೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಎಸ್‌ಎಸ್‌ಎಲ್‌ವಿಯ ಮೊದಲ ಹಾರಾಟವು ಎರಡನೇ ಹಂತದ ಬೇರ್ಪಡಿಕೆ ಸಮಯದಲ್ಲಿ ಎಕ್ವಿಪ್‌ಮೆಂಟ್ ಬೇ ಡೆಕ್‌ನಲ್ಲಿ ಅಲ್ಪಾವಧಿಗೆ ಕಂಪನ ಅಡಚಣೆಯಿಂದಾಗಿ ವಿಫಲವಾಗಿತ್ತು. ಈ ದೋಷದ ಬಗ್ಗೆ ಆಳವಾದ ವಿಶ್ಲೇಷಣೆಯನ್ನು ನಡೆಸಿದ ನಂತರ, ಇಸ್ರೋ ಸರಿಪಡಿಸುವ ಕ್ರಮಗಳನ್ನು ಕೈಗೊಂಡಿತ್ತು. ಫೆಬ್ರವರಿಯಲ್ಲಿ ಎಸ್‌ಎಸ್‌ಎಲ್‌ವಿಯ ಯಶಸ್ವಿ ಉಡಾವಣೆ ನಡೆಸಿತು. ಎಸ್‌ಎಸ್‌ಎಲ್‌ವಿ ಇಸ್ರೋದ […]