ಇಸ್ರೇಲ್: ವೈಮಾನಿಕ ದಾಳಿಯಲ್ಲಿ ಹಮಾಸ್‌ ವಾಯುಪಡೆ ಮುಖ್ಯಸ್ಥ ಮುರಾದ್ ಅಬು ಹತ್ಯೆ

ಟೆಲ್ ಅವಿವ್ (ಇಸ್ರೇಲ್): ಇಸ್ರೇಲ್ ಹಾಗೂ ಪ್ಯಾಲೆಸ್ಟೀನ್​ ನಡುವೆ ಸಂಘರ್ಷ ಮುಂದುವರೆದಿದೆ. ರಾತ್ರಿಯಿಡೀ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್‌ ಸಂಘಟನೆಯ ವಾಯುಪಡೆಯ ಮುಖ್ಯಸ್ಥ ಮುರಾದ್ ಅಬು ಮುರಾದ್‌ ಹತ್ಯೆಯಾಗಿರುವುದಾಗಿ ಇಸ್ರೇಲ್ ವಾಯುಪಡೆ ಹೇಳಿದೆ.ಶನಿವಾರ ನಡೆದ ಹತ್ಯಾಕಾಂಡದ ಸಮಯದಲ್ಲಿ ಭಯೋತ್ಪಾದಕರಿಗೆ ನಿರ್ದೇಶನ ನೀಡುವಲ್ಲಿ ಅಬು ಮುರಾದ್‌ ಹೆಚ್ಚು ಹೊಣೆಗಾರನಾಗಿದ್ದಾನೆ ಎಂದು ತಿಳಿಸಿದೆ. ”ಕಳೆದ ರಾತ್ರಿ ಇಸ್ರೇಲ್​ ವಾಯುಪಡೆಯ ಫೈಟರ್ ಜೆಟ್‌ಗಳು ಗಾಜಾ ಪಟ್ಟಿಯಾದ್ಯಂತ ವ್ಯಾಪಕವಾದ ದಾಳಿಗಳನ್ನು ನಡೆಸಿವೆ. ಹಮಾಸ್‌ ಭಯೋತ್ಪಾದನಾ ತಾಣಗಳು ಮತ್ತು ಗಾಜಾ ಪಟ್ಟಿಯಲ್ಲಿರುವ ನುಖ್ಬಾ ಭಯೋತ್ಪಾದಕ […]