ಹಿಜಾಬ್ ವಿವಾದಕ್ಕೆ ಇತಿಶ್ರೀ, ಸರ್ಕಾರದಿಂದ ಒಳ್ಳೆಯ ನಿರ್ಧಾರ: ಶಾಸಕ ರಘುಪತಿ ಭಟ್
ಉಡುಪಿ: ಶಾಲಾ, ಕಾಲೇಜುಗಳ ಸಮವಸ್ತ್ರದ ಕುರಿತಂತೆ ರಾಜ್ಯ ಸರ್ಕಾರ ಒಳ್ಳೆಯ ನಿರ್ಧಾರ ಕೈಗೊಂಡಿದೆ. ಆ ಮೂಲಕ ಹಿಜಾಬ್ ಧರಿಸುವ ಹಾಗೂ ಸಮವಸ್ತ್ರ ಬಗ್ಗೆ ಉಂಟಾಗಿದ್ದ ಗೊಂದಲಕ್ಕೆ ಇತಿಶ್ರೀ ಹಾಡಿದೆ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಹೇಳಿದ್ದಾರೆ. ಉಡುಪಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರ ಜಾರಿಗೊಳಿಸಿರುವ ಆದೇಶದಂತೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅವರ ಸಮಿತಿ ಹಾಗೂ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಸಮವಸ್ತ್ರ ನಿರ್ಧಾರ ಮಾಡಬಹುದು. ಒಂದು ಪಕ್ಷ ನಿರ್ಧಾರ ಆಗದಿದ್ದರೂ, […]