ಪರ್ಯಾಯ ಮಹೋತ್ಸದ ಸ್ವಚ್ಛತೆ ಕಾರ್ಯದಲ್ಲಿ ಅವ್ಯವಹಾರ: ಸಾಮಾನ್ಯ ಸಭೆಯಲ್ಲಿ ಸದಸ್ಯರ ಆರೋಪ
ಉಡುಪಿ: ಪರ್ಯಾಯ ಮಹೋತ್ಸದ ಸ್ವಚ್ಛತೆ ಕಾರ್ಯಕ್ಕೆ ಸಂಬಂಧಿಸಿ ನೀಡಲಾಗಿದ್ದ ಗುತ್ತಿಗೆಯಲ್ಲಿ ಅವ್ಯವಹಾರ ನಡೆದಿದೆ ಎಂದು ನಗರಸಭಾ ಸದಸ್ಯರು ಶುಕ್ರವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಆರೋಪಿಸಿದ್ದಾರೆ. ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ನಗರಸಭೆ ಸದಸ್ಯರಾದ ಗಿರೀಶ್ ಅಂಚನ್ ಹಾಗೂ ಸಂತೋಷ್ ಜತ್ತನ್ನ ಅವರು, ಪರ್ಯಾಯ ಶುಚಿತ್ವ ಕಾರ್ಯದ ಗುತ್ತಿಗೆ 23ಲಕ್ಷ ರೂ. ಮೊತ್ತಕ್ಕೆ ನೀಡಲಾಗಿದೆ. ಆದರೆ ಗುತ್ತಿಗೆದಾರರಿಂದ ಅಷ್ಟು ಮೊತ್ತದ ಕೆಲಸ ಆಗಿಲ್ಲ ದೂರಿದರು. ಗುತ್ತಿಗೆದಾರರು ನೂರು […]