ಕಡಿಯಾಳಿ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ
ಉಡುಪಿ: ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಜೂನ್ 1 ರಿಂದ ಜೂನ್ 10 ತನಕ ನಡೆಯುವ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ದೇವಸ್ಥಾನದ ವಠಾರದಲ್ಲಿ ನಡೆಯಿತು. ಜಗನ್ಮಾತೆ ಶ್ರೀ ಮಹಿಷಮರ್ದಿನಿಗೆ ಆಮಂತ್ರಣ ಪತ್ರಿಕೆ ಸಮರ್ಪಣೆ ಗೊಳಿಸಿದ ನಂತರ ಡ್ರೋನ್ ಮೂಲಕ ವಿಶಿಷ್ಟವಾಗಿ ವೇದಿಕೆಗೆ ಆಗಮಿಸಿದ ಆಮಂತ್ರಣ ಪತ್ರಿಕೆಯನ್ನು ಉಡುಪಿ ನಗರಸಭೆ ಅಧ್ಯಕ್ಷೆ ಶ್ರೀಮತಿ ಸುಮಿತ್ರಾ ನಾಯಕ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ನಾಗೇಶ್ ಹೆಗ್ಡೆ, ಬ್ರಹ್ಮ ಕಲಶೋತ್ಸವದ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ ಪಿ […]
ಸ್ಥಾನಿಕ ಬ್ರಾಹ್ಮಣ ಸಭಾ (ರಿ.) ಪಡುಬಿದ್ರಿ ಮಹಾಸಭೆ ಮತ್ತು ದಶಮಾನೋತ್ಸವ “ಸಂಭ್ರಮ” ಆಮಂತ್ರಣ
ಉಡುಪಿ: ಸ್ಥಾನಿಕ ಬ್ರಾಹ್ಮಣ ಸಭಾ (ರಿ) ಸಂಘದ ಮಹಾಸಭೆಯು ದಿನಾಂಕ: 1-5-2022 ರವಿವಾರ, ಪೂರ್ವಾಹ್ನ 10:00ಕ್ಕೆ ಸರಿಯಾಗಿ ಸಂಘದ ಗೌರವಾಧ್ಯಕ್ಷರಾದ ಶ್ರೀ ಪಿ.ಬಿ ವಾಸುದೇವ ರಾವ್ ಇವರ ಮಾರ್ಗದರ್ಶನದಲ್ಲಿ ಹಾಗೂ ಅಧ್ಯಕ್ಷರಾದ ಶ್ರೀ ಎಂ. ಕೆ ಮೋಹನ್ ರಾವ್ ಅವರ ಅಧ್ಯಕ್ಷತೆಯಲ್ಲಿ ಪಡುಬಿದ್ರಿ ಶ್ರೀ ಬಾಲಗಣಪತಿ ಪ್ರಸನ್ನಪಾರ್ವತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ. ದಶಮಾನೋತ್ಸವ “ಸಂಭ್ರಮ” ಆಮಂತ್ರಣ ಸಭಾಂಗಣ: ದಿನಾಂಕ: 1-5-2022 ನೇ ರವಿವಾರ ಪೂರ್ವಾಹ್ನ 11.30 “ಸಂಭ್ರಮ”ದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ಉದ್ಘಾಟಕರು: ಶ್ರೀ ಪಿ. ಬಿ. ವಾಸುದೇವ […]
ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಮತದಾನ ಜಾಗೃತಿ: ಹೀಗೊಂದು ಅಪರೂಪದ ಆಮಂತ್ರಣ ಪತ್ರಿಕೆ
ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಏನಿರಬಹುದು, ನಾಮ ಸಂವತ್ಸರ , ವಧೂ ವರರ ಹೆಸರು, ಮದುವೆ ನಡೆಯುವ ಸ್ಥಳ, ಇನ್ನೂ ಹೆಚ್ಚೆಂದರೆ ಆಶೀರ್ವಾದವೇ ಉಡುಗೊರೆ ಎಂಬ ಸಂದೇಶ.. ಆದರೆ ಇಲ್ಲೋಂದು ವಿನೂತನ ವಿವಾಹ ಆಮಂತ್ರಣ ಪತ್ರಿಕೆ ಇದೆ, ಇದು 2019 ರ ಲೋಕಸಭಾ ಚುನಾವಣೆಯ ಮಹತ್ವವನ್ನು ಸಾರುತ್ತಿದೆ, ಆಮಂತ್ರಣ ಪತ್ರಿಕೆಯಲ್ಲಿ ಮತದಾನ ಮಾಡಿ, ಪ್ರಜಾಪ್ರಭುತ್ವ ಗೆಲ್ಲಿಸಿ, ನಾವು ಮಾರಾಟಕ್ಕಿಲ್ಲ ನಮ್ಮ ಮತ ಮಾರಾಟಕ್ಕಿಲ್ಲ ಎಂಬ ಸಂದೇಶ ಎಲ್ಲ ಬಂಧು ಬಳಗವನ್ನು ತಲುಪುತ್ತಿದೆ. ಮೇ 1 ರಂದು ತಲ್ಲೂರು ಪಾರ್ತಿಕಟ್ಟೆ […]