ಅಂತರ್‌ಕಾಲೇಜು ರಸಪ್ರಶ್ನೆ ಸ್ಪರ್ಧೆ

ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜು ಉಡುಪಿ ಇಲ್ಲಿನ ವಿದ್ಯಾರ್ಥಿ ಕ್ಷೇಮಪಾಲನಾ ಮಂಡಳಿಯ ವತಿಯಿಂದ ಅಂತರ್ ಕಾಲೇಜು ಮಟ್ಟದ ‘ನಿಮ್ಮ ಪ್ರಪಂಚವನ್ನು ತಿಳಿಯಿರಿ’ ಎಂಬ ರಸಪ್ರಶ್ನಾ ಸ್ಪರ್ಧೆಯನ್ನು ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಕ್ವಿಜ್ ಮಾಸ್ಟರ್, ಪ್ರೊ ಪ್ರಭಾಕರ ಶಾಸ್ತ್ರಿ, ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ನಾಯ್ಕ್ ವಹಿಸಿದ್ದರು.ರಸಪ್ರಶ್ನೆ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಸುಮಾರು 40 ತಂಡಗಳು ಭಾಗವಹಿಸಿದ್ದವು. […]