ಸಂಕಷ್ಟದಲ್ಲಿ ಸಿಲುಕಿದ್ದ ಉದ್ಯೋಗಿಗಳನ್ನು ವಾಪಾಸ್ ಕರೆಸಿಕೊಂಡ ಇನ್ಫೋಸಿಸ್

ಬೆಂಗಳೂರು: ಅಮೆರಿಕಾದಲ್ಲಿ ಸಿಲುಕಿದ್ದ 200 ಮಂದಿ ಭಾರತೀಯ ಉದ್ಯೋಗಿಗಳನ್ನು ಇನ್ಫೋಸಿಸ್ ಸಂಸ್ಥೆ ವಾಪಸ್ ಕರೆಸಿಕೊಂಡಿದೆ. ಅಂತಾರಾಷ್ಟ್ರೀಯ ವಿಮಾನಗಳು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಹಾಗೂ ಅಮೆರಿಕಾದಲ್ಲಿ ಕೊರೊನಾ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ಭಾರತೀಯರು ಹಾಗೂ ಅವರ ಕುಟುಂಬವನ್ನು ಸಂಸ್ಥೆ ವಾಪಸ್ ಕರೆ‌‌ ತಂದಿದೆ. ಸ್ಯಾನ್ ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ವಿಶೇಷ ಚಾರ್ಟೆಡ್ ವಿಮಾನದಲ್ಲಿ  ಕರೆತರಲಾಗಿದೆ ಎಂದು ಇನ್ಫೋಸಿಸ್ ಉಪಾಧ್ಯಕ್ಷ ಸಮೀರ್ ಗೋಸವಿ ತಿಳಿಸಿದ್ದಾರೆ.