ಇಂದ್ರಾಳಿ: ಬಾವಿಯಲ್ಲಿ ಮೃತದೇಹ ಪತ್ತೆ

ಉಡುಪಿ: ಇಂದ್ರಾಳಿಯ ರೈಲ್ವೇ ನಿಲ್ದಾಣದ ಬಳಿ ಇರುವ ಬಾವಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.ವ್ಯಕ್ತಿಯನ್ನು ನಿತ್ಯಾನಂದ ಶೆಟ್ಟಿಗಾರ್‌(47) ಎಂದು ಗುರುತಿಸಲಾಗಿದೆ. ರೈಲ್ವೇ ಪೊಲೀಸ್‌, ನಗರ ಪೊಲೀಸ್‌ ಠಾಣೆ ಹಾಗೂ ಅಗ್ನಿಶಾಮಕ ದಳ ಕಾರ್ಯಚರಣೆ ಮೂಲಕ ಶವವನ್ನು ಮೇಲಕ್ಕೆತ್ತಲು ನೆರವಾದರು. ಸಮಾಜಸೇವಕ ನಿತ್ಯಾನಂದ ಒಳಕಾಡು ಸಹಕರಿಸಿದರು. ವ್ಯಕ್ತಿ ರೈಲ್ವೇಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬಂದಿ ಎಂದು ತಿಳಿದುಬಂದಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.