ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಗರ್ಡರ್ ಜೋಡಿಸುವ ಪ್ರಕ್ರಿಯೆ ಆರಂಭ

ಉಡುಪಿ: ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಗರ್ಡರ್ ಜೋಡಣೆ ಪ್ರಕ್ರಿಯೆ ನಡೆದಿದ್ದು, ಅದನ್ನು ಜೋಡಿಸುವ ಪ್ರಕ್ರಿಯೆ ಸೋಮವಾರದಿಂದ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 11 ರಿಂದ 2 ಗಂಟೆಯವರೆಗೆ ರೈಲು ಸಂಚಾರದಲ್ಲಿ ವ್ಯತ್ಯಯ ಕಂಡುಬರಲಿದೆ. ನಾಳೆ ಮಧ್ಯಾಹ್ನದೊಳಗೆ ಗರ್ಡರ್ ಜೋಡಣೆ ಪೂರ್ಣಗೊಳ್ಳಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು ಒಟ್ಟು 60 ಮೀಟರ್ ನ ಗರ್ಡರ್ ಇದಾಗಿದ್ದು, 1.5 ಮೀ ಪುಶ್ ಆಗಲು 20 ನಿಮಿಷ ಕಾಲಾವಕಾಶ ಬೇಕಿದೆ. ಸಂಪೂರ್ಣಗೊಂಡ […]