ಬಕ ಪಕ್ಷಿಯ ಧ್ಯಾನ: ಇಂಚರಾ ಪಿ ಕ್ಲಿಕ್ಕಿಸಿದ ಚಿತ್ರ

ಕೊಳದ ಬಕ ಪಕ್ಷಿಯೊಂದು ಬೇಟೆಗಾಗಿ ನೀರನ್ನು ನೋಡುತ್ತ ತನ್ಮಯವಾಗಿರುವ ಈ ಚೆಂದದ ಚಿತ್ರವನ್ನು ಸೆರೆಹಿಡಿದವರು ಪುತ್ತೂರಿನ ಇಂಚರಾ ಪಿ ಅವರು. ಇಂಚರಾ ಆಳ್ವಾಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿನಿ. ಹವ್ಯಾಸವಾಗಿ ಫೋಟೋಗ್ರಫಿಯನ್ನು ನೆಚ್ಚಿಕೊಂಡಿರುವ ಇಂಚರಾ ಅವರ ಚಿತ್ರಗಳಲ್ಲಿ ಪ್ರಕೃತಿಯ ವಿವಿಧ ನೋಟಗಳು ಕಾಡುವಂತಿರುತ್ತವೆ.