ಫೈನಲ್ ಲಗ್ಗೆಯಿಟ್ಟ ಭಾರತ ಮಹಿಳಾ ಸಂಯುಕ್ತ ಆರ್ಚರಿ ತಂಡ : ಏಷ್ಯನ್ ಗೇಮ್ಸ್ 2023

ಹ್ಯಾಂಗ್‌ಝೌ (ಚೀನಾ): ವಿಶ್ವ ಚಾಂಪಿಯನ್ ಆಗಿರುವ ಭಾರತದ ಮಹಿಳಾ ಸಂಯುಕ್ತ ಆರ್ಚರಿ ತಂಡವು ಗುರುವಾರ ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಫೈನಲ್​ಗೆ ಲಗ್ಗೆ ಇಟ್ಟಿದೆ. ಹ್ಯಾಂಗ್‌ಝೌ ನಡೆಯುತ್ತಿರುವ ಏಷ್ಯನ್ ಗೇಮ್ಸ್​ನ ಬಿಲ್ಲುಗಾರಿಕೆಯಲ್ಲಿ ಭಾರತದ ಮಹಿಳಾ ಸಂಯುಕ್ತ ತಂಡ ಫೈನಲ್​ ಪ್ರವೇಶಿಸಿದೆ. ಇದಕ್ಕೂ ಮುನ್ನ ಕೆಳ ಶ್ರೇಯಾಂಕದ ಹಾಂಕಾಂಗ್‌ಗೆ 231-220 ಅಂಕಗಳ ಗುರಿಯನ್ನು ನೀಡಿ ಸೆಮಿಫೈನಲ್‌ನಲ್ಲಿ ಬೆವರು ಹರಿಸಿತು.ಜ್ಯೋತಿ, ಅದಿತಿ ಮತ್ತು ಪರಿಣಿತಿ ಬಿಲ್ಲುಗಾರಿಕೆಯಲ್ಲಿ ಉತ್ತಮ ಪ್ರದರ್ಶನ ನೀಡಿದರು ಜ್ಯೋತಿ ಸುರೇಖಾ ವೆನ್ನಮ್, ಅದಿತಿ ಸ್ವಾಮಿ ಮತ್ತು ಪರ್ನೀತ್ […]