ಮಹಿಳಾ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತದ ರೋಮಾಂಚಕ ಕದನ: ಸೂಪರ್ ಓವರ್ ನ ಅದ್ಭುತ ಪ್ರದರ್ಶನದಿಂದ ಪಂದ್ಯ ಭಾರತದ ತೆಕ್ಕೆಗೆ
ಮುಂಬೈ: ಇಲ್ಲಿನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಮತ್ತು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ನಡುವೆ ಟಿ20 ಪಂದ್ಯ ನಡೆದಿದ್ದು, ಇದು ಅತ್ಯುತ್ತಮ ಟಿ20 ಪಂದ್ಯ ಎಂದು ಬಣ್ಣಿಸಲಾಗುತ್ತಿದೆ. ಐದು ಪಂದ್ಯಗಳ ಸರಣಿಯ ಎರಡನೇ ಮಹಿಳಾ ಟಿ20 ಪಂದ್ಯದಲ್ಲಿ 30,000 ಕ್ಕೂ ಹೆಚ್ಚು ಪ್ರೇಕ್ಷಕರ ಸಮ್ಮುಖದಲ್ಲಿ ಆಡಿದ ಈ ಆಟವು ಟೈನಲ್ಲಿ ಕೊನೆಗೊಂಡಿತ್ತು. ಇದಾದ ಬಳಿಕ ಸೂಪರ್ ಓವರ್ ಎಸೆಯಲಾಯಿತು. ಟೀಮ್ ಇಂಡಿಯಾದ ಮಹಿಳಾ ಘಟಕವು ಮೊದಲ ಬಾರಿಗೆ ಸೂಪರ್ ಓವರ್ ಆಡುತ್ತಿತ್ತು […]
ಬಾಂಗ್ಲಾ ಚೆಂಡಿಗರನ್ನು ಬಗ್ಗಿಸಿದ ಭಾರತೀಯ ಬ್ಯಾಟರ್ ಇಶಾನ್ ಕಿಶನ್: ಏಕದಿನ ಪಂದ್ಯದಲ್ಲಿ ದಾಖಲೆಯ ದ್ವಿಶತಕ ಬಾರಿಸಿದ ಪೋರ
ಚಿತ್ತಗಾಂಗ್: ಇಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಇಳಿದ ನಂತರ ಇಶಾನ್ ಕಿಶನ್ ಅವರ ದ್ವಿಶತಕ ಮತ್ತು ವಿರಾಟ್ ಕೊಹ್ಲಿ ಅವರ 113 ರನ್‌ಗಳ ಬೆಂಬಲದೊಂದಿಗೆ ಭಾರತವು 409/8 ರನ್ ಗಳಿಸಿದೆ. ಮೆಹಿದಿ ಹಸನ್ ಕೇವಲ ಐದನೇ ಓವರ್‌ನಲ್ಲಿ ಶಿಖರ್ ಧವನ್ ಅವರನ್ನು ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸುವ ಮೂಲಕ ಭಾರತಕ್ಕೆ ಆಘಾತ ನೀಡಿದರು. ರೋಹಿತ್ ಶರ್ಮಾ ಗಾಯಗೊಂಡ ನಂತರ ತಂಡದಲ್ಲಿದ್ದ ಕಿಶನ್ ಇನ್ನಿಂಗ್ಸ್ ಸ್ಥಿರತೆ ಕಾಯ್ದುಕೊಳ್ಳಲು ಕೊಹ್ಲಿಯೊಂದಿಗೆ ಕೈಜೋಡಿಸಿದರು. ಮೂವತ್ತರ ಶತಕ ಬಾರಿಸುವವರೆಗೂ […]
ಕೂಚಿಪುಡಿ ನೃತ್ಯೋತ್ಸವದಲ್ಲಿ ಅನೌಷ್ಕಾ ಸುನಕ್ ಭಾಗಿ: ಭಾರತವೆಂದರೆ ನನಗಿಷ್ಟ ಎಂದ ಪೋರಿ
ಲಂಡನ್: ಭಾರತವು ನನ್ನ ಕುಟುಂಬ, ಮನೆ ಮತ್ತು ಸಂಸ್ಕೃತಿ ಒಟ್ಟಿಗೆ ಬೆರೆತಿದೆ ಮತ್ತು ನಾನು ಪ್ರತಿ ವರ್ಷ ಅಲ್ಲಿಗೆ ಹೋಗಲು ಇಷ್ಟಪಡುತ್ತೇನೆ ಎಂದು ಲಂಡನ್‌ನಲ್ಲಿ ನಡೆದ ಕೂಚಿಪುಡಿ ನೃತ್ಯ ಉತ್ಸವ – ರಂಗ್ 2022 ರಲ್ಲಿ ಯುಕೆ ಪ್ರಧಾನಿ ರಿಷಿ ಸುನಕ್ ಅವರ ಪುತ್ರಿ ಅನೌಷ್ಕಾ ಸುನಕ್ ಹೇಳಿದ್ದಾರೆ. ಖ್ಯಾತ ಕೂಚಿಪುಡಿ ನರ್ತಕಿ ಅರುಣಿಮಾ ಕುಮಾರ್ ಅವರು ಸಂಯೋಜಿಸಿದ್ದ ನೃತ್ಯೋತ್ಸವದಲ್ಲಿ, 4 ರಿಂದ 85 ವರ್ಷ ವಯಸ್ಸಿನ ಪ್ರಪಂಚದಾದ್ಯಂತದ 100 ಕಲಾವಿದರು ಇದರಲ್ಲಿ ಭಾಗವಹಿಸಿದ್ದರು. ಭಾರತದ 75 […]
77% ರೇಟಿಂಗ್ ನೊಂದಿಗೆ ಜಾಗತಿಕವಾಗಿ ಅತ್ಯಂತ ಜನಪ್ರಿಯ ನಾಯಕನ ಪಟ್ಟದಲ್ಲಿ ಮುಂದುವರಿದ ಪ್ರಧಾನಿ ಮೋದಿ
ನವದೆಹಲಿ: ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್ ಸರ್ವೆ ಪ್ರಕಾರ, ಭಾರತದ ಪ್ರಧಾನಿ ನರೇಂದ್ರ ಮೋದಿಯವರು 77% ಅನುಮೋದನೆಯ ರೇಟಿಂಗ್ ನೊಂದಿಗೆ ಜಾಗತಿಕವಾಗಿ ಅತ್ಯಂತ ಜನಪ್ರಿಯ ನಾಯಕ ಪಟ್ಟದಲ್ಲಿ ಮುಂದುವರೆದಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ನಾರ್ಮನ್ ಅಲ್ಬನೀಸ್ 56% ನೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, 41% ರೇಟಿಂಗ್ ನೊಂದಿಗೆ ಅಮೇರಿಕಾ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷ ಜೋ ಬೈಡನ್ ಮೂರನೇ ಸ್ಥಾನದಲ್ಲಿದ್ದಾರೆ. ಕೆನಡಾದ ಪ್ರಧಾನಿ ಜಸ್ಟಿನ್ ಟ್ರ್ಯೂಡೋ 38% , ಯುಕೆ ಪ್ರಧಾನಿ ರಿಷಿ ಸುನಕ್ 36% ಮತ್ತು ಜಪಾನ್ […]
ಚೀನಾ ಮೇಲೆ ಹದ್ದಿನ ಕಣ್ಣು: ಇದೇ ಮೊದಲ ಬಾರಿಗೆ 3ಡಿ-ಮುದ್ರಿತ ಬಂಕರ್ ನಿರ್ಮಿಸಲಿರುವ ಭಾರತೀಯ ಸೇನೆ
ಲಡಾಕ್: ಕಳೆದ ಎರಡು ವರ್ಷಗಳಿಂದ ಭಾರತ-ಚೀನಾ ಗಡಿ ಬಿಕ್ಕಟ್ಟು ಮುಂದುವರಿದಿದ್ದು, ಶತ್ರುಗಳೊಂದಿಗೆ ಸೆಣಸಾಡಲು ಮತ್ತು ಯಾವುದೇ ಸಮಯದಲ್ಲಿ ಯಾವುದೇ ವಿಷಮ ಪರಿಸ್ಥಿತಿಗೆ ಸಿದ್ಧರಾಗಿರಲು ಭಾರತೀಯ ಸೇನೆಯು ಲೈನ್ ಆಫ್ ಆಕ್ಚುವಲ್ ಕಂಟೋಲ್(ಎಲ್.ಎ.ಸಿ)ನಲ್ಲಿ ಪ್ರಮುಖ ಮೂಲಸೌಕರ್ಯ ನಿರ್ಮಾಣ ಯೋಜನೆಯನ್ನು ರೂಪಿಸಿದೆ. ಭಾರತೀಯ ಸೇನೆಯು ಚೀನಾದ ಎದುರು ಪೂರ್ವ ಲಡಾಖ್ ಸೆಕ್ಟರ್‌ನಲ್ಲಿ 450 ಟ್ಯಾಂಕ್‌ಗಳು ಮತ್ತು 22000 ಕ್ಕೂ ಹೆಚ್ಚು ಸೈನಿಕರಿಗೆ ವಸತಿಗಾಗಿ ಮೂಲಸೌಕರ್ಯಗಳನ್ನು ನಿರ್ಮಿಸಲಿದೆ ಎಂದು ವರದಿಯಾಗಿದೆ. ಸೇನೆಯು 3ಡಿ-ಮುದ್ರಿತ ಶಾಶ್ವತ ರಕ್ಷಣೆಗಳನ್ನು ನಿರ್ಮಿಸಲಿದೆ. ಲಡಾಕ್ ನಲ್ಲಿ ಭಾರತೀಯ […]