ಬಿಸಿಸಿಐ ಘೋಷಣೆ : ಭಾರತ ಕ್ರಿಕೆಟ್ ತಂಡಕಕ್ಕೆ ಡ್ರೀಮ್-11 ಪ್ರಾಯೋಜಕತ್ವ
ಮುಂಬೈ: ಬೈಜೂಸ್‌ಗೆ (Byju’s) ಬದಲಾಗಿ ಡ್ರೀಮ್-11 ಜೆರ್ಸಿ ಪ್ರಾಯೋಜಕತ್ವ ತನ್ನದಾಗಿಸಿಕೊಂಡಿದೆ. ಇನ್ಮುಂದೆ ಟೀಂ ಇಂಡಿಯಾ (Team India) ಡ್ರೀಮ್-11 ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಇದೇ ತಿಂಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿ ಮೂಲಕ ಭಾರತ ಡ್ರೀಮ್-11 ಜೆರ್ಸಿಯೊಂದಿಗೆ ಕಾಣಿಸಿಕೊಳ್ಳಲಿದೆ. ಕ್ರಿಕೆಟ್ ಅಭಿಮಾನಿಗಳ ಜನಪ್ರಿಯ ಗೇಮಿಂಗ್ ಪ್ಲಾಟ್‌ಫಾರ್ಮ್ ಡ್ರೀಮ್-11 (Dream11) ಭಾರತ ಕ್ರಿಕೆಟ್ ತಂಡದ ಜೆರ್ಸಿ (Jerseys) ಪ್ರಾಯೋಜಕತ್ವ ಪಡೆದುಕೊಂಡಿದೆ. ಮುಂದಿನ 3 ವರ್ಷಗಳ ಅವಧಿಗೆ ಪ್ರಾಯೋಜಕತ್ವದ ಹಕ್ಕನ್ನು ಪಡೆದುಕೊಂಡಿರುವುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) […]