ಹೆಬ್ರಿಯಲ್ಲಿ ಇಂದು ಕಲ್ಪರಸ ಮಳಿಗೆ ಉದ್ಘಾಟನೆ..

ಹೆಬ್ರಿ: ರುಚಿಕರವೂ.. ಆರೋಗ್ಯಕರವೂ.. ಆದ ಕಲ್ಪರಸ ಸಮೃದ್ಧಿ ಸ್ವದೇಶಿ ಉತ್ಪನ್ನಗಳ ಮಳಿಗೆ ಇಂದು ಹೆಬ್ರಿಯ ಬಸ್ ನಿಲ್ದಾಣದ ಎದುರುಗಡೆ ಇರುವ ರಾಮನಾಥ (ಪೂಜಾ) ಕಾಂಪ್ಲೆಕ್ಸ್ ನಲ್ಲಿ ಉದ್ಘಾಟನೆಗೊಂಡಿತು. ಉಕಾಸ ಕಂಪೆನಿ ಉಡುಪಿಯ ಅಧ್ಯಕ್ಷರಾದ ಸತ್ಯನಾರಾಯಣ ಉಡುಪ ಮಳಿಗೆಯನ್ನು ಉದ್ಘಾಟಿಸಿದರು. ಜಗನ್ನಾಥ ಶೆಣೈ, ಕಟ್ಟಡ ಮಾಲಕರಾದ ಅನಂತ ನಾಯಕ್ ಹಾಗೂ ಸಮೃದ್ಧಿ ಸ್ವದೇಶಿ ಉತ್ಪನ್ನಗಳ ಮಳಿಗೆ ಮಾಲಕರಾದ ಸುದೇಶ್ ಪ್ರಭು ಉಪಸ್ಥಿತರಿದ್ದರು. ಕುಂದಾಪುರದಾದ್ಯಂತ ಪರಿಚಿತಗೊಂಡಿರುವ ಕಲ್ಪರಸ ಇದೀಗ ಹೆಬ್ರಿಯಲ್ಲಿ ಕೂಡ ಲಭ್ಯವಾಗಿದೆ. ರೈತರಿಂದ ನೇರವಾಗಿ ಗ್ರಾಹಕರಿಗೆ ಅನ್ನುವಂತೆ ಕೆಮಿಕಲ್ […]