ಸುಂಕ ಹೇರಿಕೆ ಪರಿಣಾಮ: ಅಮೇರಿಕಕ್ಕೆ ಅಂಚೆ ಸೇವೆಯನ್ನೇ ಅಮಾನತುಗೊಳಿಸಿದ ಭಾರತ

ನವದೆಹಲಿ: ಅಂಚೆ ಇಲಾಖೆಯು ಅಮೆರಿಕಕ್ಕೆ ಕೆಲವು ವಸ್ತುಗಳ ರವಾನೆ ಸೇವೆಯನ್ನು ಅಮಾನತಿನಲ್ಲಿ ಇರಿಸಿದೆ.ಅಮೆರಿಕದ ಸೀಮಾಸುಂಕ ಇಲಾಖೆಯು ಹೊರಡಿಸಿರುವ ಹೊಸ ನಿಯಮಗಳ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಅಮೆರಿಕಕ್ಕೆ ತೆರಳುವ ವಿಮಾನಗಳು ವಸ್ತುಗಳನ್ನು ಒಯ್ಯಲು ಒಪ್ಪುತ್ತಿಲ್ಲ. ಹೀಗಾಗಿ ಅಂಚೆ ಇಲಾಖೆಯು ಈ ನಿರ್ಧಾರ ಕೈಗೊಂಡಿದೆ ಎಂದು ಸಂವಹನ ಸಚಿವಾಲಯವು ಶನಿವಾರ ಹೇಳಿದೆ. ಆದರೆ ಪತ್ರಗಳು, ಕಡತಗಳು ಹಾಗೂ 100 ಡಾಲರ್‌ಗಿಂತ ಕಡಿಮೆ ಮೌಲ್ಯದ ಉಡುಗೊರೆಗಳನ್ನು ಅಮೆರಿಕಕ್ಕೆ ಕಳುಹಿಸಿಕೊಡುವ ಸೇವೆಗಳು ಮುಂದುವರಿಯುತ್ತವೆ ಎಂದು ಅದು ಸ್ಪಷ್ಟಪಡಿಸಿದೆ. ಅಮೆರಿಕದ ಆಡಳಿತವು 2025ರ […]