ಶೇ 6.1 ರಿಂದ 6.3ಕ್ಕೆ ಜಿಡಿಪಿ ಅಂದಾಜಿಸಿದ ಐಎಂಎಫ್​ : ಏರುಗತಿಯಲ್ಲಿ ಭಾರತದ ಆರ್ಥಿಕತೆ

ನವದೆಹಲಿ : ಆರ್ಥಿಕ ಪ್ರಗತಿ ಸಾಧಿಸುವಲ್ಲಿ ವಿಶ್ವ ಪ್ರಬಲ ರಾಷ್ಟ್ರಗಳನ್ನು ಹಿಂದಿಕ್ಕಿ ಮುಂಚೂಣಿಯಲ್ಲಿ ಸಾಗುತ್ತಿರುವ ಭಾರತ, ಪ್ರಸ್ತುತ ವರ್ಷದಲ್ಲಿ ತನ್ನ ಹಿಂದಿನ ಅಂದಾಜಿಗಿಂತ ಹೆಚ್ಚಿನ ದರದಲ್ಲಿ ಅಭಿವೃದ್ಧಿ ಸಾಧಿಸಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್​) ತನ್ನ ವರದಿಯಲ್ಲಿ ತಿಳಿಸಿದೆ.ಭಾರತವು ಪ್ರಸ್ತುತ ವರ್ಷದಲ್ಲಿ ಶೇ. 6.1ರಷ್ಟು ಆರ್ಥಿಕ ಪ್ರಗತಿ ಹೊಂದುವುದಾಗಿ ಅಂದಾಜಿಸಲಾಗಿತ್ತು. ಆದರೆ ಮೀರಿ ಈ ಬಾರಿ ಶೇ. 6.3ರಷ್ಟು ಆರ್ಥಿಕ ಪ್ರಗತಿ ಕಾಣಲಿದೆ ಎಂದು ಐಎಂಎಫ್​ ವಿಶ್ವಾಸ ವ್ಯಕ್ತಪಡಿಸಿದೆ. ಭಾರತದಲ್ಲಿನ ಆರ್ಥಿಕ ಚಟುವಟಿಕೆಗಳು ತೀವ್ರ ಪ್ರಮಾಣದಲ್ಲಿ ಏರಿಕೆಯಾದ […]