ಮಂಗಳೂರು ವಿಮಾನ ನಿಲ್ದಾಣದ ಇಂಟಿಗ್ರೇಟೆಡ್ ಕಾರ್ಗೋ ಟರ್ಮಿನಲ್ ಕಾರ್ಯಾರಂಭ

ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ ಇಂಟಿಗ್ರೇಟೆಡ್ ಕಾರ್ಗೋ ಟರ್ಮಿನಲ್ (ICT) ಅನ್ನು ಸೋಮವಾರ, ಮೇ 1 ರಂದು ಸಾರ್ವಜನಿಕ ಬಳಕೆಗಾಗಿ ಮುಕ್ತಗೊಳಿಸಿದೆ. 1,891 ಚದರ ಮೀಟರ್ ವಿಸ್ತೀರ್ಣದಲ್ಲಿ 1,200 ಚದರ ಮೀಟರ್ ವಿಸ್ತೀರ್ಣವನ್ನು ಅಂತರರಾಷ್ಟ್ರೀಯ ಸರಕು ಮತ್ತು ಉಳಿದವು ದೇಶೀಯ ಸರಕುಗಳಿಗಾಗಿ ಮೀಸಲಿಡಲಾಗಿದೆ. ಐಸಿಟಿ ವರ್ಷಕ್ಕೆ 9,000 ಟನ್‌ಗಳಷ್ಟು ಅಂತರರಾಷ್ಟ್ರೀಯ ಮತ್ತು ದೇಶೀಯ ಸರಕುಗಳನ್ನು ನಿರ್ವಹಿಸುತ್ತದೆ. ಪ್ರಾರಂಭದ ದಿನದಂದು ದೇಶೀಯ ಒಳಬರುವ ಮತ್ತು ಹೊರಹೋಗುವ ಸರಕುಗಳನ್ನು ನಿರ್ವಹಿಸುವ ಮೂಲಕ ವಿಮಾನನಿಲ್ದಾಣವು ಐಸಿಟಿಯಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. […]