ಭಾರತ-ಪಾಕ್ ಪಂದ್ಯದ ವೇಳೆ ಅಭಿಮಾನಿಗಳಿಂದ ಅನುಚಿತ ವರ್ತನೆ ಆರೋಪಿಸಿ ಐಸಿಸಿಗೆ ದೂರು ನೀಡಿದ ಪಿಸಿಬಿ

ನವದೆಹಲಿ: ಅಹಮದಾಬಾದ್‌ನಲ್ಲಿ ಅಕ್ಟೋಬರ್ 14ರಂದು ನಡೆದ ಭಾರತ ವಿರುದ್ಧದ ಹೈ-ವೋಲ್ಟೇಜ್ ಪಂದ್ಯದ ವೇಳೆ ಆತಿಥೇಯ ಪ್ರೇಕ್ಷಕರು ತೋರಿದ ‘ಅನುಚಿತ ವರ್ತನೆ’ಯ ಬಗ್ಗೆ ಆಕ್ಷೇಪವೆತ್ತಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ಐಸಿಸಿಗೆ ದೂರು ನೀಡಿದೆ. ಒಂದು ಲಕ್ಷಕ್ಕೂ ಅಧಿಕ ಪ್ರೇಕ್ಷಕರ ಆಸನ ಸಾಮರ್ಥ್ಯ ಹೊಂದಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್‌ನ ಬಹುನಿರೀಕ್ಷಿತ ಭಾರತ-ಪಾಕ್ ಪಂದ್ಯದಲ್ಲಿ ಪಾಕ್ ಆಟಗಾರರನ್ನು ಗುರಿಯಾಗಿಸಿಕೊಂಡು ಭಾರತೀಯ ಪ್ರೇಕ್ಷಕರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ವರ್ತನೆ ತೋರಿದ್ದಾರೆ. ಇದು ಐಸಿಸಿ ಟೂರ್ನಿ ಆಯೋಜಿಸುವ ಕ್ರಮವಲ್ಲ […]

ಬಿಸಿಸಿಐ ಅಧಕ್ಷ ಸ್ಥಾನಕ್ಕೆ ರೋಜರ್ ಬಿನ್ನಿ ಹೆಸರು ಪ್ರಸ್ತಾಪ: ಸೌರವ್ ಗಂಗೂಲಿ ಐಸಿಸಿಯತ್ತ ಪಯಣ?

ಭಾರತದ ಮಾಜಿ ಆಲ್‌ರೌಂಡರ್ ಮತ್ತು 1983 ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿರುವ ರೋಜರ್ ಬಿನ್ನಿ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಚುನಾವಣೆಯಲ್ಲಿ ಅಧ್ಯಕ್ಷ ಹುದ್ದೆಗೆ ಅಗ್ರ ಸ್ಪರ್ಧಿಯಾಗಿದ್ದಾರೆ ಎಂದು ವರದಿಯಾಗಿದೆ. 67 ವರ್ಷದ ಮಾಜಿ ಆಲ್‌ರೌಂಡರ್ ಬಿಸಿಸಿಐ ಮುಖ್ಯಸ್ಥರಾಗಲಿದ್ದಾರೆ ಮತ್ತು ಜೈ ಶಾ ಅವರು ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯಾಗಿ ಮುಂದುವರಿಯುವ ಸಾಧ್ಯತೆಗಳಿವೆ ಎನ್ನಲಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಪ್ರತಿನಿಧಿಯಾಗಿ ಅಕ್ಟೋಬರ್ 18 ರಂದು ನಡೆಯಲಿರುವ ಚುನಾವಣೆಗಾಗಿ ಬಿಸಿಸಿಐನ ಕರಡು ಮತದಾರರ ಪಟ್ಟಿಯಲ್ಲಿ ಬಿನ್ನಿ […]

ಭಾರತೀಯ ಬೌಲರ್ ವಿನೂ ಮಂಕಡ್ ಅವರ ಮಾಂಕಡಿಂಗ್ ತಂತ್ರದಿಂದ ಪಂದ್ಯ ಮತ್ತು ಭಾರತೀಯರ ಹೃದಯ ಗೆದ್ದ ದೀಪ್ತಿ ಶರ್ಮಾ

ಕ್ರಿಕೆಟ್ ಕ್ರೀಡೆಯಲ್ಲಿ, ಬೌಲರ್ ಬೌಲ್ ಮಾಡುವ ಅಂತಿಮ ಹಂತದಲ್ಲಿದ್ದಾಗ ನಾನ್-ಸ್ಟ್ರೈಕಿಂಗ್ ಬ್ಯಾಟ್ಸ್‌ಮನ್ ಕ್ರೀಸ್ ತೊರೆದು ಬ್ಯಾಕ್ ಅಪ್ ಮಾಡಿದಲ್ಲಿ ಬೌಲರ್ ಅವರನ್ನು ರನ್ ಔಟ್ ಮಾಡುವ ಪ್ರಕ್ರಿಯೆಯನ್ನು ಮಾಂಕಡಿಂಗ್ ಎನ್ನುತ್ತಾರೆ. 1948 ರ ಸಿಡ್ನಿ ಟೆಸ್ಟ್‌ನಲ್ಲಿ ಇದೇ ರೀತಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಬಿಲ್ ಬ್ರೌನ್ ಅವರನ್ನು ರನೌಟ್ ಮಾಡಿದ ಭಾರತೀಯ ಬೌಲರ್ ವಿನೂ ಮಾಂಕಡ್ ಅವರ ತಂತ್ರವನ್ನು ಕ್ರಿಕೆಟ್ ಜಗತ್ತಿನಲ್ಲಿ ಅವರದೇ ಹೆಸರಿನಿಂದ ಗುರುತಿಸಲಾಗುವುದು ಭಾರತೀಯರಿಗೆ ಹೆಮ್ಮೆ. ಒಬ್ಬ ಭಾರತೀಯ ಕ್ರಿಕೆಟಿಗನ ಇದೇ ತಂತ್ರವನ್ನು ಬಳಸಿ ಇನ್ನೊಬ್ಬಾಕೆ […]

ಐಸಿಸಿ ಏಕದಿನ ಆಟಗಾರರ ರ‍್ಯಾಂಕಿಂಗ್ ಪ್ರಕಟ: ಅಗ್ರಸ್ಥಾನದಲ್ಲಿ ಕೊಹ್ಲಿ, ರೋಹಿತ್

ವಿಶ್ವಕಪ್ ಟೂರ್ನಿ ಲೀಗ್ ಪಂದ್ಯಗಳು ಮುಕ್ತಾಯಗೊಂಡಿದೆ. ಜುಲೈ 9 ರಿಂದ ಸೆಮಿಫೈನಲ್ ಪಂದ್ಯಗಳು ಆರಂಭಗೊಳ್ಳಲಿದೆ. ಇದರ ಬೆನ್ನಲ್ಲೇ ಐಸಿಸಿ ಏಕದಿನ ಕ್ರಿಕೆಟ್ ಆಟಗಾರರ ರ‍್ಯಾಂಕಿಂಗ್ ಪ್ರಕಟಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರೇ ಅಗ್ರಸ್ಥಾನದಲ್ಲಿ ಅಲಂಕೃತರಾಗಿದ್ದಾರೆ. ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ, ಸ್ಫೋಟಕ ಬ್ಯಾಟ್ಸ್‌‌ಮನ್ ರೋಹಿತ್ ಶರ್ಮಾ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಕೊಹ್ಲಿ ಹಾಗೂ ರೋಹಿತ್ ಹೊರತು ಪಡಿಸಿದರೆ ಟಾಪ್ 10 ಪಟ್ಟಿಯಲ್ಲಿ ಟೀಂ ಇಂಡಿಯಾ […]