ಬುಮ್ರಾ ನಾಯಕತ್ವದಲ್ಲಿ ಐಪಿಎಲ್​ ಸ್ಟಾರ್ಸ್ ಪಡೆ : ಐರ್ಲೆಂಡ್​ ಟಿ20 ಸರಣಿಗೆ ತೆರಳಿದ ಭಾರತ ತಂಡ

ಹೈದರಾಬಾದ್​: ವೆಸ್ಟ್​ ಇಂಡೀಸ್​ ಪ್ರವಾಸದ ನಂತರ ಟಿ20 ಸ್ಟಾರ್​ಗಳ ಪಡೆ ಐರ್ಲೆಂಡ್​ಗೆ ಇಂದು ತೆರಳಿದೆ. ಗಾಯದಿಂದ ಚೇತರಿಸಿಕೊಂಡಿರುವ ವೇಗಿ ಜಸ್ಪ್ರಿತ್​ ಬುಮ್ರಾ ಅವರ ನಾಯಕತ್ವದಲ್ಲಿ ತಂಡ ಐರ್ಲೆಂಡ್​ನಲ್ಲಿ ಪಂದ್ಯಗಳನ್ನು ಆಡಲಿದೆ. ಆಗಸ್ಟ್​ 18 ರಿಂದ ಆರಂಭ ಆಗಲಿರುವ ಐರ್ಲೆಂಡ್​ ವಿರುದ್ಧದ 3 ಟಿ20 ಪಂದ್ಯಗಳ ಸರಣಿಗೆ ಭಾರತ ತಂಡ ಇಂದು ಪ್ರವಾಸ ಬೆಳೆಸಿದೆ ಭಾರತ ಮತ್ತು ಐರ್ಲೆಂಡ್ ನಡುವಿನ ಮೂರು ಟಿ20 ಪಂದ್ಯಗಳು ಡಬ್ಲಿನ್‌ನ ಮಲಾಹೈಡ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಆಗಸ್ಟ್ 18, 20 ಮತ್ತು 23 […]