ಪ್ರತಿ ಸೆಕೆಂಡಿಗೆ Social media ಗೆ 5 ಜನರ ಸೇರ್ಪಡೆ: 500 ಕೋಟಿ ದಾಟಿದಬಳಕೆದಾರರ ಸಂಖ್ಯೆ
ಹೈದರಾಬಾದ್:ವಿಶ್ವದ ಜನಸಂಖ್ಯೆಯ ಶೇ 60ಕ್ಕೂ ಹೆಚ್ಚು ಜನ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ ಎಂದು ಇತ್ತೀಚಿನ ಅಧ್ಯಯನವೊಂದು ಬಹಿರಂಗಪಡಿಸಿದೆ. ವಿಶ್ವದ ಜನಸಂಖ್ಯೆ ಇತ್ತೀಚೆಗೆ 800 ಕೋಟಿ ಗಡಿಯನ್ನು ದಾಟಿದೆ. ಇದರಲ್ಲಿ ಜುಲೈ 2023 ರ ಹೊತ್ತಿಗೆ ಸುಮಾರು 500 ಕೋಟಿ ಜನ (4.88 ಶತಕೋಟಿ ಬಳಕೆದಾರರ ಗುರುತುಗಳು) ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಕ್ರಿಯರಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಂಖ್ಯೆ 3.7 ರಷ್ಟು ಹೆಚ್ಚಾಗಿದೆ. ವಿಶ್ವದಲ್ಲಿ ಇಂಟರ್ನೆಟ್ ಸೇವೆಗಳು ಸುಲಭವಾಗಿ ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳ […]