ಭಾರತ ತಂಡ ಪ್ರತಿನಿಧಿಸಿ ಕಿಂಗ್​ ಕೊಹ್ಲಿ ಇಂದಿಗೆ 15 ವರ್ಷ

ಹೈದರಾಬಾದ್​:19 ವರ್ಷದೊಳಗಿನವರ ವಿಶ್ವಕಪ್​ ತಂಡದ ನಾಯಕರಾಗಿ ಭಾರತವನ್ನು ಚಾಂಪಿಯನ್​ ಪಟ್ಟಕ್ಕೆ ಏರಿಸಿದ್ದ ವಿರಾಟ್​ ಕೊಹ್ಲಿ ತಮ್ಮ ಬ್ಯಾಟಿಂಗ್​ನಿಂದ 2008ರ ಇದೇ ದಿನ ಶ್ರೀಲಂಕಾ ಪ್ರವಾಸದ ಬಿ ತಂಡಕ್ಕೆ ಆಯ್ಕೆ ಆಗಿ ಮೈದಾನದಲ್ಲಿ ಬ್ಯಾಟ್​​ ಹಿಡಿದು ನಿಂತಿದ್ದರು. ವಿರಾಟ್​ ತಮ್ಮ ಸಾಮರ್ಥ್ಯವನ್ನು 19 ವರ್ಷದೊಳಗಿನವರ ವಿಶ್ವಕಪ್​ನಲ್ಲೇ ತೋರಿದ್ದರು. ಆರು ಪಂದಗಳಲ್ಲಿ 47ರ ಸರಾಸರಿಯಲ್ಲಿ 235 ರನ್​ ಗಳಿಸಿದ್ದರು. ಅಂದು ಅವರ ಆಟ ಕಂಡ ಹಿರಿಯರು, ಭಾರತಕ್ಕೆ ಒಬ್ಬ ಉತ್ತಮ ಆಟಗಾರ ಸಿಕ್ಕಿದ್ದಾನೆ ಎಂದಿದ್ದರು. ಅದನ್ನು ವಿರಾಟ್​ ಸಾಬೀತು ಮಾಡಿದ್ದಾರೆ […]