ಹೊಸಾಡು ಸೇವಾ ಸಹಕಾರ ಸಂಘ ಶುಭಾರಂಭ: ಸಹಕಾರಿ ರಂಗದ ಬೆಳವಣಿಗೆಗೆ ಗ್ರಾಮೀಣ ಜನರ ಸಹಕಾರ ಅಗತ್ಯ: ಇಂದ್ರಾಳಿ ಜಯಕರ ಶೆಟ್ಟಿ

ಕುಂದಾಪುರ: ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯ ಬಾಲಾಜಿ ಕಾಂಪ್ಲೆಕ್ಸ್ ಮೊದಲನೇ ಮಹಡಿಯಲ್ಲಿ ಭಾನುವಾರ ನೂತನ ಹೊಸಾಡು ಸೇವಾ ಸಹಕಾರ ಸಂಘ   ಶುಭಾರಂಭಗೊಂಡಿತು. ಸಂಘವನ್ನು ಉದ್ಘಾಟಿಸಿ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಸಹಕಾರಿ ಸಂಘದ ಮೂಲಕ‌ ಸರ್ಕಾರದ ವಿವಿಧ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತಿದೆ. ಗ್ರಾಮೀಣ ಭಾಗದ ಜನರಿಗೆ ಆರ್ಥಿಕ ಬಲ ತುಂಬುವ ಕೆಲಸ ಸಹಕಾರಿ ಸಂಘಗಳ ಮೂಲಕ‌ ಆಗುತ್ತಿದೆ. ಇದೀಗ ಸಹಕಾರಿ ರಂಗವು ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ […]