ರೈತರ ಮಕ್ಕಳಿಗೆ ತೋಟಗಾರಿಕಾ ತರಬೇತಿ

ಉಡುಪಿ, ಮಾ.10: ತೋಟಗಾರಿಕೆ ಇಲಾಖೆಯ ವತಿಯಿಂದ ರೈತರ ಮಕ್ಕಳಿಗೆ 10 ತಿಂಗಳ ತರಬೇತಿ ಕಾರ್ಯಕ್ರಮವನ್ನು ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದು, ತರಬೇತಿ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯ ಸಾಮಾನ್ಯ ವರ್ಗದ 6 ಹಾಗೂ ಪರಿಶಿಷ್ಟ ಜಾತಿಯ 1 ಒಟ್ಟು 7 ಅಭ್ಯರ್ಥಿಗಳ ಗುರಿ ಇದ್ದು, ಸದರಿ ಗುರಿಯಲ್ಲಿ 5 ಪುರುಷ ಹಾಗೂ 2 ಮಹಿಳೆಯರಿಗೆ ಮೀಸಲಿರುತ್ತದೆ. ಕನಿಷ್ಠ 18 ವರ್ಷದೊಳಗಿನ ಹಾಗೂ ಗರಿಷ್ಠ ಸಾಮಾನ್ಯ ಅಭ್ಯರ್ಥಿಗಳಿಗೆ 30 ವರ್ಷ, ಪ.ಜಾತಿ ಮತ್ತು ಪಂಗಡದ […]