140 ವರ್ಷಗಳ ಬಳಿಕ ಹಾಂಕಾಂಗ್ ನಲ್ಲಿ ಜಳಪ್ರಳಯ.
ಹಾಂಕಾಂಗ್ : ದಕ್ಷಿಣ ಚೀನಾದ ಆರ್ಥಿಕ ಕೇಂದ್ರವಾಗಿರುವ ಹಾಂಕಾಂಗ್ ನಲ್ಲಿ ಭಾರೀ ಮಳೆ ಬೀಳುತ್ತಿದೆ. ರಸ್ತೆಗಳು ಮತ್ತು ಸುರಂಗಮಾರ್ಗಗಳು ಜಲಾವೃತಗೊಂಡಿದ್ದರಿಂದ ಶುಕ್ರವಾರ ಬೆಳಗ್ಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.ಹಾಂಕಾಂಗ್‌ನಲ್ಲಿ ಜಲ ಪ್ರಳಯವೇ ಉಂಟಾಗಿದೆ. ಒಂದು ಗಂಟೆಯೊಳಗೆ ಸುರಿದ ಮಳೆಯಿಂದ ನಗರವೇ ತತ್ತರಿಸಿ ಹೋಗಿದೆ. ಹಾಂಕಾಂಗ್ ಮಹಾನಗರವು 140 ವರ್ಷಗಳಲ್ಲಿ ಈ ಪ್ರಮಾಣದ ಮಳೆಯನ್ನು ಕಂಡಿಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಭುಗಿಲೆದ್ದ ಪ್ರವಾಹ..: ಗುರುವಾರ ರಾತ್ರಿ 11 ರಿಂದ 12 ರ ನಡುವೆ 158.1 ಮಿಲಿಮೀಟರ್ (6.2 […]