ನ್ಯಾಯ ಕೇಳೋಕೆ ಹೋದವರಿಗೆ ಆವಾಜ್ ಹಾಕಿದ ಗೃಹ ಸಚಿವ: ನ್ಯಾಯ ಕೇಳೋದೇ ತಪ್ಪಾಗೋಯ್ತಾ ಎಂದು ಅಳಲು ತೋಡಿಕೊಂಡ ಹರ್ಷ ಅಕ್ಕ
ಬೆಂಗಳೂರು: ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷನ ಬರ್ಬರ ಕೊಲೆ ಪ್ರಕರಣದ ಆರೋಪಿಗಳು ಜೈಲಿನಲ್ಲಿ ವಿ.ಐ.ಪಿ ಸವಲತ್ತುಗಳನ್ನು ಪಡೆಯುತ್ತಿರುವ ಬಗ್ಗೆ ಮಾಧ್ಯಮ ವರದಿಗಳನ್ನು ಕಂಡು ಬೇಸರಗೊಂಡ ಹರ್ಷ ಅಕ್ಕ ಅಶ್ವಿನಿ ಘಟನೆಯ ಸತ್ಯಾಸತ್ಯತೆಯ ಬಗ್ಗೆ ಗೃಹ ಸಚಿವರ ಬಳಿ ಕೇಳಿ ತಿಳಿದುಕೊಳ್ಳಲು ಸಚಿವರ ಕಚೇರಿಗೆ ಭೇಟಿ ನೀಡಿದ್ದಾರೆ. ಅಶ್ವಿನಿ ಬೆಂಗಳೂರಿನಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿ, ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ತನ್ನ ಸಹೋದರ ಹರ್ಷನ ಹಂತಕರಿಗೆ ನೀಡುತ್ತಿರುವ ‘ಉನ್ನತ ದರ್ಜೆಯ ಸೌಲಭ್ಯ’ಗಳ ಕುರಿತು ಪ್ರಶ್ನಿಸಿದ್ದಾರೆ. […]
ಸದ್ಯಕ್ಕಿಲ್ಲ ಮುಖ್ಯಮಂತ್ರಿ ಬದಲಾವಣೆ: ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ?
ಬೆಂಗಳೂರು: 2023 ರ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಕಾರ್ಯತಂತ್ರದ ಬಗ್ಗೆ ಸೂಚನೆಯನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬೆಂಗಳೂರು ಭೇಟಿ ಸದ್ಯಕ್ಕಂತೂ ಯಾವುದೇ ಫಲಿತಾಂಶವನ್ನು ನೀಡಿದಂತೆ ಕಾಣುತ್ತಿಲ್ಲ. ರಾಜ್ಯ ಬಿಜೆಪಿ ಕೋರ್ ಕಮಿಟಿ ಮತ್ತು ಪಕ್ಷದ ನಾಯಕರೊಂದಿಗೆ ನಿಗದಿಪಡಿಸಲಾಗಿದ್ದ ಸಭೆ ರದ್ದುಗೊಂಡಿರುವುದು ಬೊಮ್ಮಾಯಿ ಅವರೆ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎನ್ನುವ ಸೂಚನೆ ಎಂದು ಬಲ್ಲ ಮೂಲಗಳು ತಿಳಿಸುತ್ತಿವೆ. ಅಮಿತ್ ಶಾ ಅವರ ಬೆಂಗಳೂರು ಭೇಟಿ ಮುಖ್ಯಮಂತ್ರಿ ಬದಲಾವಣೆ ಅಥವಾ ಸಂಪುಟ […]
ಪಿ.ಎಸ್.ಐ ಪರೀಕ್ಷೆ ನೇಮಕಾತಿ ರದ್ದು, ಮರು ಪರೀಕ್ಷೆಗೆ ತೀರ್ಮಾನ
ಬೆಂಗಳೂರು: 545 ಪಿ.ಎಸ್.ಐ ಹುದ್ದೆಗಳಿಗೆ ನಡೆಸಲಾಗಿದ್ದ ಪರೀಕ್ಷಾ ನೇಮಕಾತಿಯನ್ನು ರದ್ದುಪಡಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಆರೋಪಿಗಳನ್ನು ಹೊರತುಪಡಿಸಿ, ಉಳಿದವರಿಗೆ ಶೀಘ್ರವೇ ಮರು ಪರೀಕ್ಷೆ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನು ಬಂಧಿಸಲಾಗಿದೆ. ಇದಲ್ಲದೆ ಇನ್ನಿತರ ಆರೋಪಿಗಳಾದ ಅರ್ಚನಾ, ದಿವ್ಯಾ, ಚಾಲಕ ಸದ್ದಾಂ, ಸುನಂದಾರನ್ನು ಪುಣೆಯಲ್ಲಿ ವಶಕ್ಕೆ ಪಡೆಯಲಾಗಿದೆ. ಇವರೆಲ್ಲರನ್ನೂ ರಾಜ್ಯಕ್ಕೆ ಕರೆತರಲಾಗುತ್ತಿದೆ. ಒಂದಕ್ಕಿಂತ ಹೆಚ್ಚು ಕೇಂದ್ರಗಳಲ್ಲಿ ಅವ್ಯವಹಾರ ನಡೆದಿರುವುದು […]