ವರಾಹರೂಪಂ ಕೇಸ್ ಗೆದ್ದ ಕಾಂತಾರ ತಂಡ: ಶೀಘ್ರದಲ್ಲೆ ಒಟಿಟಿಗೆ ಬರಲಿದೆ ಹಾಡು
ಕೊನೆಗೂ ಹೊಂಬಾಳೆ ಫಿಲಂಸ್ ವರಾಹರೂಪಂ ಹಾಡಿನ ಮೇಲೆ ನಡೆಯುತ್ತಿದ್ದ ಕೇಸ್ ಅನ್ನು ಗೆದ್ದಿದೆ. ಕೇರಳ ನ್ಯಾಯಾಲಯದಲ್ಲಿ ಕಾನೂನು ಹೋರಾಟದಲ್ಲಿ ಜಯಗಳಿಸಿದ ನಂತರ ನವೆಂಬರ್ 25 ರಂದು ಹಾಡಿನ ಮೇಲೆ ನಿಷೇಧವನ್ನು ತೆಗೆದುಹಾಕಲಾಗಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರಿಷಭ್ ಶೆಟ್ಟಿ, “ದೈವಾನು ದೈವಗಳ ಆಶೀರ್ವಾದ ಹಾಗೂ ಜನರ ಅಭಿಮಾನದಿಂದ ವರಾಹರೂಪಂ ಕೇಸ್ ಗೆದ್ದಿದ್ದೇವೆ. ಜನರ ಕೋರಿಕೆಯನ್ನು ಪರಿಗಣಿಸಿ ಅತಿ ಶೀಘ್ರದಲ್ಲಿ ಒಟಿಟಿ ನಲ್ಲಿ ಹಾಡನ್ನು ಬದಲಾಯಿಸಲಿದ್ದೇವೆ” ಎಂದಿದ್ದಾರೆ. ಅಂತೂ ಪ್ರೇಕ್ಷಕರ ಮೆಚ್ಚಿನ ವರಾಹರೂಪಂ ಹಾಡು ಮರಳಿ ಕಾಂತಾರವನ್ನು […]
ಅಂಕೋಲಾದಲ್ಲೂ ಕಾಂತಾರ ಪಂಜುರ್ಲಿ ದೈವದ ಕಲರವ: ಕಲಾವಿದನ ಕೈಯಲ್ಲಿ ಮೂಡಿದ ಸುಂದರ ಕಲಾಕೃತಿ
ಅಂಕೋಲಾ: ಇಲ್ಲಿನ ಅವರ್ಸಾದಲ್ಲಿ ಕಲಾವಿದ ದಿನೇಶ್ ಮೇತ್ರಿಯವರ ಕೈಚಳಕದಲ್ಲಿ ಕಾಂತಾರದ ಪಂಜುರ್ಲಿ-ಗುಳಿಗ ದೈವದ ಕಲಾಕೃತಿಯೊಂದು ಮೂಡಿದ್ದು ಜನಮನ ಸೂರೆಗೊಂಡಿದೆ. ಈ ಕಲಾಕೃತಿಯನ್ನು ಅಮರ್ ನಾಯ್ಕ್ ಎನ್ನುವ ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.
ಅರ್ಧ ಶತಕ ಬಾರಿಸಿದ ಕಾಂತಾರ: ಪಂಜುರ್ಲಿ ಮತ್ತು ಗುಳಿಗ ದೈವದ ಆಶೀರ್ವಾದವೆಂದ ರಿಷಬ್ ಶೆಟ್ಟಿ
ಜಗತ್ತಿನಾದ್ಯಂತ ಹಿರಿ-ಕಿರಿ ಎಂಬ ಬೇಧವಿಲ್ಲದೆ ಎಲ್ಲರ ಹೃದಯಗಳನ್ನು ಗೆದ್ದ ಕಾಂತಾರ ಚಿತ್ರವು ಯಶಸ್ವಿ 50 ದಿನಗಳನ್ನು ಪೂರೈಸಿದೆ. ಚಿತ್ರವೊಂದು ಎಷ್ಟು ಕೋಟಿ ಗಳಿಸಿತು ಎನ್ನುವುದನ್ನೇ ಲೆಕ್ಕ ಹಾಕುತ್ತಿದ್ದ ಈ ದಿನಗಳಲ್ಲಿ, ಹಿಂದಿನಂತೆ ಚಿತ್ರ ಎಷ್ಟು ದಿನ ಓಡಿತು ಎಂದು ಕೇಳುವುದನ್ನು ಮರೆತೇ ಬಿಟ್ಟಿದ್ದ ಕಾಲಘಟ್ಟದಲ್ಲಿ ಕಾಂತಾರ ಚಿತ್ರವು 50 ದಿನಗಳನ್ನು ಪೂರೈಸಿರುವುದು ಚಿತ್ರತಂಡದಲ್ಲಿ ಸಂತಸ ಮೂಡಿಸಿದೆ. ಈ ಬಗ್ಗೆ ಟ್ವೀಟ್ ಮಾಡಿ ಸಂತೋಷವನ್ನು ಹಂಚಿಕೊಂಡಿರುವ ನಟ ನಿರ್ದೇಶಕ ರಿಷಬ್ ಶೆಟ್ಟಿ,” ನಮಗೆ ದಿವ್ಯ ಸಂಭ್ರಮದ ಕ್ಷಣ. ಜಗತ್ತಿನಾದ್ಯಂತ […]
ಕರಾವಳಿ ಸೊಗಡಿನ ಕಾಂತಾರಕ್ಕೆ ಪ್ರೇಕ್ಷಕರಿಂದ ಭರಪೂರ ಅಭಿನಂದನೆ: ರಿಷಭ್ ಶೆಟ್ಟಿ ಅಭಿನಯಕ್ಕೆ ಮನಸೋತ ಅಭಿಮಾನಿಗಳು
ಉಡುಪಿ: ಅಪ್ಪಟ ಕರಾವಳಿಯ ಸೊಗಡನ್ನು ಹೊಂದಿರುವ ಕಾಂತಾರಾ ಕನ್ನಡ ಚಲನಚಿತ್ರವು ಶುಕ್ರವಾರ ಬಿಡುಗಡೆಹೊಂದಿದ್ದು, ಚಿತ್ರವನ್ನು ವೀಕ್ಷಿಸಿದವರೆಲ್ಲರಿಂದಲೂ ಒಳ್ಳೆಯ ವಿಮರ್ಶೆಗಳು ಬಂದಿವೆ. ತುಳುನಾಡಿನ ಭೂತ ಕೋಲ ಮತ್ತು ಕಂಬಳಗಳನ್ನು ಚಿತ್ರಿಸಿರುವ ಈ ಸಿನಿಮಾವು ತುಳುವರಲ್ಲದವರ ಮನಸ್ಸನ್ನೂ ಸೂರೆಗೊಂಡಿರುವುದು ವಿಶೇಷ. ಬಂಡಾಯ ನಾಯಕ ಶಿವನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿರುವ ರಿಷಭ್ ಶೆಟ್ಟಿ ಅಭಿನಯಕ್ಕೆ ಅಭಿಮಾನಿಗಳೆಲ್ಲಾ ಮನಸೋತಿದ್ದಾರೆ. ಈ ಚಿತ್ರದಲ್ಲಿ ಕಂಬಳ ಓಡಿಸುವುದನ್ನು ಡ್ಯೂಪ್ ಇಲ್ಲದೆ ತಾನೇ ನಿರ್ವಹಿಸಿರುವ ರಿಷಬ್ ಇದಕ್ಕಾಗಿ ತಮ್ಮ ಹುಟ್ಟೂರಿನಲ್ಲಿ ಹಲವು ದಿನಗಳ ಕಾಲ ಅಭ್ಯಾಸ […]
ಕೆಜಿಎಫ್ ಬ್ಯಾನರ್, ಲೂಸಿಯಾ ಡೈರೆಕ್ಟರ್ ಜೊತೆಗೂಡಿದ ಫಹಾದ್ ಫಾಸಿಲ್: ಅ.9 ರಂದು ಸೆಟ್ಟೇರಲಿದೆ ‘ಧೂಮಮ್’
ಕೆಜಿಎಫ್ ಸರಣಿಯ ಭರ್ಜರಿ ಯಶಸ್ಸಿನ ನಂತರ, ಫಹದ್ ಫಾಸಿಲ್ ನಾಯಕರಾಗಿ ‘ಧೂಮಮ್’ ಎಂಬ ಹೊಸ ಚಲನಚಿತ್ರವನ್ನು ನಿರ್ಮಿಸುವ ಬಗ್ಗೆ ಹೊಂಬಾಳೆ ಫಿಲಂಸ್ ಟ್ವಿಟರ್ ನಲ್ಲಿ ಘೋಷಿಸಿದೆ. ಹೊಂಬಾಳೆ ಫಿಲಂಸ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಧೂಮಮ್ ಚಿತ್ರದ ಮೊದಲ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಥ್ರಿಲ್ಲರ್ ಕಥೆ ಹೊಂದಿರುವ ಚಿತ್ರವನ್ನು ಈ ಹಿಂದೆ ಲೂಸಿಯಾ ಮತ್ತು ಯು-ಟರ್ನ್ ಚಿತ್ರಗಳನ್ನು ಬರೆದು, ನಿರ್ದೇಶಿಸಿದ್ದ ಪವನ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ. ಧೂಮಮ್ ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತೆ ಅಪರ್ಣಾ ಬಾಲಮುರಳಿ ನಾಯಕಿಯಾಗಿದ್ದಾರೆ. […]