ಪಂದ್ಯಕ್ಕೂ ಮುನ್ನ ಮೌನಾಚರಣೆ : ರೈಲು ದುರಂತದಲ್ಲಿ ಮಡಿದವರಿಗೆ ಹಾಕಿ ಆಟಗಾರರಿಂದ ಕಂಬನಿ
ಲಂಡನ್: ಒಡಿಶಾದಲ್ಲಿ ನಡೆದ ಭೀಕರ ತ್ರಿವಳಿ ರೈಲು ದುರಂತಕ್ಕೆ ಹಾಕಿ ಆಟಗಾರರು ಸಂತಾಪ ಸೂಚಿಸಿದರು. ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮೌನಾಚರಣೆ ಮಾಡಿದರು. ಒಡಿಶಾದಲ್ಲಿ ತ್ರಿವಳಿ ರೈಲುಗಳ ಭೀಕರ ಡಿಕ್ಕಿ ದುರಂತದಲ್ಲಿ 288 ಜನರು ಬಲಿಯಾಗಿದ್ದು, ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಭೀಕರ ದುರಂತ: ಜೂನ್ 2 ರಂದು (ಶುಕ್ರವಾರ) ಸಂಜೆ 7 ಗಂಟೆ ಸುಮಾರಿನಲ್ಲಿ ಒಡಿಶಾದ ಬನಹಗಾ ರೈಲು ನಿಲ್ದಾಣದ ಬಳಿ ಜವರಾಯ ಕಾದು ಕುಳಿತಿದ್ದ. ನಿಲ್ದಾಣದ ಹೊರಭಾಗದಲ್ಲಿ ಹೌರಾದಿಂದ ಚೆನ್ನೈಗೆ ಹೊರಟಿದ್ದ ಕೋರಮಂಡಲ್ ರೈಲು ಚಲಿಸುತ್ತಿದ್ದಾಗಲೇ […]