ಹಿರಿಯಡ್ಕ ಸರಕಾರಿ ಪ್ರ.ದರ್ಜೆ ಕಾಲೇಜು:ಡಿ.30 ರಂದು ಸದಸ್ಯರ ಸಭೆ     

ಉಡುಪಿ: ಹಿರಿಯ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ಮತ್ತು ದಶಮಾನೋತ್ಸವ ಸಮಾರಂಭ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಕ್ರೀಡೋತ್ಸವವನ್ನು ನಡೆಸುವ ಬಗ್ಗೆ ಡಿ. 30 ರಂದು ಪೂರ್ವಾಹ್ನ 9:30ಕ್ಕೆ ಹಿರಿಯಡ್ಕ ಸರಕಾರಿ ಪ್ರ.ದರ್ಜೆ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರ ಸಭೆ ನಡೆಯಲಿದೆ. ಎಲ್ಲಾ ಸದಸ್ಯರು ಭಾಗವಹಿಸುವಂತೆ ಪ್ರಕಟನೆ ತಿಳಿಸಿದೆ.