ಹಿರಿಯಡಕ ದೇವಸ್ಥಾನದ ವಾರ್ಷಿಕ ಸಿರಿ ಜಾತ್ರೆ ಸಂಪನ್ನ

ಉಡುಪಿ: ಹಿರಿಯಡಕ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ವಾರ್ಷಿಕ ಸಿರಿ ಜಾತ್ರೆ ವೈಭವದಿಂದ ಸಂಪನ್ನಗೊಂಡಿತು. ದೇವಸ್ಥಾನದ ಪರ್ಯಾಯ ತಂತ್ರಿಗಳಾದ ಗುರುರಾಜ ತಂತ್ರಿ ಹಾಗೂ ಅರ್ಚಕರಾದ ಅನಂತ ಅಡಿಗ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇವಳದ ಅರ್ಚಕರು ಧ್ವಜಸ್ತಂಭದ ಎದುರು ಪಾತ್ರಿಗಳಿಗೆ ಸಿಂಗಾರದ ಹೂವನ್ನು ನೀಡುವ ಮೂಲಕ ದರ್ಶನ ಸೇವೆಗೆ ಚಾಲನೆ ನೀಡಿದರು. ಉಡುಪಿ ಹಾಗೂ ಹೊರ ಜಿಲ್ಲೆಯಿಂದ ಆಗಮಿಸಿದ ಭಕ್ತರು ಸಿರಿ ಜಾತ್ರೆಯ ವೈಭವವನ್ನು ಕಣ್ತುಂಬಿಕೊಂಡರು. ಬೆಳಗ್ಗೆ ಧ್ವಜಾರೋಹಣ, ಸಂಜೆ ಆರಾಧನಾ ಪೂಜೆ, ಪೂರ್ಣಿಮಾ […]