ಹಿರಿಯಡಕ: ಕವಿ ಬಿ.ಆರ್.ಲಕ್ಷ್ಮಣ್‍ರಾವ್ ರೊಂದಿಗೆ ಆತ್ಮೀಯ ಸಂವಾದ

ಉಡುಪಿ : ಅಮೋಘ (ರಿ.) ಹಿರಿಯಡಕ ಹಾಗೂ ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ನಾಡಿನ ಖ್ಯಾತ ಕವಿ ಬಿ.ಆರ್.ಲಕ್ಷ್ಮಣ್‍ರಾವ್ ಅವರೊಂದಿಗೆ ಆತ್ಮೀಯ ಸಂವಾದ ಕಾವ್ಯ-ಗಾನ-ಕುಂಚ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು. ಹಿರಿಯ ಕವಿ ಬಿ.ಆರ್.ಲಕ್ಷ್ಮಣ್ ರಾವ್ ಅವರು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಪ್ರತಿಯೊಬ್ಬ ಮನುಷ್ಯನಿಗೂ ಹೊರಬಾಳು ಮತ್ತು ಒಳಬಾಳು ಎಂಬುದು ಇರುತ್ತದೆ. ಹೊರಬಾಳಿಗೆ ಉದ್ಯೋಗ, ಸಂಪಾದನೆ, ಮನೆ, ಆಸ್ತಿ-ಪಾಸ್ತಿ ಮೊದಲಾದವು ಮುಖ್ಯವಾಗುತ್ತವೆ. ಕೇವಲ ಇದರಿಂದಷ್ಟೇ ವ್ಯಕ್ತಿ […]

ಎ.7 :ನಮ್ಮ ಬಿರುವೆರ್ ಹಿರಿಯಡಕ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

ಹಿರಿಯಡಕ: ನಮ್ಮ ಬಿರುವೆರ್ ಹಿರಿಯಡಕ ಇದರ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಎ.7 ರಂದು ಅಂಜಾರು ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ನಡೆಯಲಿದೆ. ಬೆಳ್ಳಿಗೆ 9 ಗಂಟೆಗೆ ಗರಡಿ ಪೂಜೆ, 9:30ಕ್ಕೆ  ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, 11:30ರಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷ ಗಾನ ವೈಭವ ನಡೆಯಲಿದೆ.  ಮಧ್ಯಾಹ್ನ ಗಂಟೆ 1ರಿಂದ  ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಹಿರಿಯಡ್ಕ :ಮಹಿಳಾ ಸಬಲೀಕರಣ, ಆತ್ಮೀಯ ಸಮ್ಮಿಲನ ಕಾರ್ಯಕ್ರಮ

ಉಡುಪಿ : ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾ ಲೇಖಕಿಯರ ಸಂಘದ ಸಹಯೋಗದಲ್ಲಿ ಮಹಿಳಾ ಸಬಲೀಕರಣ, ವಿಚಾರ ಸಂಕಿರಣ, ಸಂವಾದ ಮತ್ತು ಆತ್ಮೀಯ ಸಮ್ಮಿಲನ ಕಾರ್ಯಕ್ರಮವು ನಡೆಯಿತು. ಕಾಲೇಜಿನ ಪ್ರಾಂಶುಪಾಲೆ ಮತ್ತು ಉಡುಪಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ನಿಕೇತನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿ, ಕಾಲೇಜಿನ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ಮಹಿಳೆಯರ ಬಗ್ಗೆ ಗೌರವ ಮತ್ತು ಸಂವೇದನಾ ಶೀಲತೆಯನ್ನು ಬೆಳೆಸಿಕೊಂಡು ಸೌಹಾರ್ದಯುತ ಸಮಾಜ ನಿರ್ಮಿಸಲು […]