ನಮಗೆಲ್ಲ ಕ್ರೀಡಾಸ್ಪೂರ್ತಿಯಾದ ಹಿರಿಯಡ್ಕ ಗಾಂಧೀಮೈದಾನ ಉಳಿಸಿ ಎಂದು ಮೊರೆಯಿಟ್ಟರು: ಮೈದಾನದಲ್ಲಿ ಮರಳು ದಾಸ್ತಾನಿಗೆ ಸಾರ್ವಜನಿಕರ ಬೇಸರ
ಹಿರಿಯಡ್ಕ: ಕ್ರೀಡಾ ಸ್ಪೂರ್ತಿಗೆ ಕಿಚ್ಚಾಗಿದ್ದ, ಯುವ ಜನರ ಪ್ರೇರಣೆಯಾಗಿದ್ದ, ನೂರಾರು ಜನರ ಕ್ರೀಡಾ ಬದುಕಿಗೆ ದಾರಿದೀಪವಾಗಿದ್ದ ಹಿರಿಯಡ್ಕದ ಗಾಂಧೀ ಮೈದಾನವನ್ನು ಉಳಿಸಿಕೊಡಿ, ನಮ್ಮ ಕ್ರೀಡಾ ಮನೋಭಾವಕ್ಕೆ ಪೇರಣೆನೀಡುತ್ತಿದ್ದ ಈ ಪ್ರೀತಿಯ ಮೈದಾನವನ್ನು ಉಳಿಸಿಕೊಡಿ ಎಂದು ಗೋಗರೆಯುತ್ತಿದ್ದಾರೆ ಈ ಮೈದಾನದಲ್ಲಿ ಆಟವಾಡಿದ ಯುವಕರು. ಯಾಕಪ್ಪಾ ಅಂತದ್ದೇನಾಯ್ತು? ಈ ಮೈದಾನಕ್ಕೆ ಅಂತ ನೀವು ಕೇಳಬಹುದು. ಇಲ್ಲಿನ ಯುವಕರ ಜೀವವೇ ಆಗಿರುವ ಈ ಮೈದಾನದಲ್ಲಿ ಮರಳು ಶೇಖರಣೆ ಮಾಡಿ ಇದನ್ನು ಕ್ರಮೇಣವಾಗಿ ಮರಳು ಶೇಖರಣಾ ಸ್ಥಳ ಮಾಡುವ ಉದ್ದೇಶದಿಂದ ಮೈದಾನಕ್ಕೆ ಬೇಲಿ […]