ರಾಜ್ಯದ ಸಾಹಿತ್ಯ ಲೋಕ ದರಿದ್ರ ಸ್ಥಿತಿಗೆ ತಲುಪಿದೆ: ಡಾ. ಮಹಾಬಲೇಶ್ವರ ರಾವ್ ಕಳವಳ

ಉಡುಪಿ: ಶೃಂಗೇರಿಯಲ್ಲಿ ಈಚೆಗೆ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಪರಿಸರವಾದಿ ಕಲ್ಕುಳಿ ವಿಠಲ ಹೆಗಡೆಗೆ ವ್ಯವಸ್ಥೆ ನಕ್ಸಲ್‌ ಹಣೆಪಟ್ಟಿ ಕಟ್ಟಿದೆ. ಅವರು ಸಮ್ಮೇಳನದ ಅಧ್ಯಕ್ಷರಾಗಿದ್ದರೆಂಬ ಕಾರಣಕ್ಕೆ ಸರ್ಕಾರ ಅನಗತ್ಯ ವಿವಾದ ಎಬ್ಬಿಸಿ ಅನುದಾನ ನಿಲ್ಲಿಸಿದೆ. ಅಲ್ಲದೆ, ಪೊಲೀಸ್‌ ಸರ್ಪಗಾವಲಿನಲ್ಲಿ ದಾಂದಲೆ ನಡೆಸಿ, ಎರಡು ದಿನ ನಡೆಯಬೇಕಿದ್ದ ಗೋಷ್ಠಿಯನ್ನು ಒಂದೇ ದಿನಕ್ಕೆ ಮುಗಿಸಿದೆ ಎಂದು ಕುಂಜಿಬೆಟ್ಟು ಡಾ. ಟಿಎಂಎ ಪೈ ಶಿಕ್ಷಣ ಕಾಲೇಜಿನ ಸಮನ್ವಯಾಧಿಕಾರಿ, ಲೇಖಕ ಡಾ. ಮಹಾಬಲೇಶ್ವರ ರಾವ್ ಆರೋಪಿಸಿದರು. ಡಾ. ನಿ. ಮುರಾರಿ ಬಲ್ಲಾಳ್ ಮತ್ತು […]