ಮಂಗಳೂರು: ಹಿಂದೂ ಕಾರ್ಯಕರ್ತರ ಗಡಿಪಾರು ಆದೇಶ; ಹಿಂಜಾವೇ ಖಂಡನೆ 

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಹಿಂದೂ ಕಾರ್ಯಕರ್ತರನ್ನು ಗಡಿಪಾರು ಮಾಡುವ ಪೊಲೀಸರ ಕ್ರಮ ಖಂಡನೀಯ. ಇದನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಇದು ಹಿಂದೂ ಸಂಘಟನೆಗಳನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ಹಿಂದೂ ಸಂಘಟನೆಗಳು ಪೊಲೀಸರಿಗೆ ಮಾಹಿತಿ ನೀಡಿ ಗೋರಕ್ಷಣೆಯ ಕಾರ್ಯವನ್ನು ಮಾಡಿದ ಕಾರಣಕ್ಕೆ ಹಾಗೂ ಹೋಳಿ ಆಚರಣೆಯ ನೆಪದಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಯನ್ನು ತಡೆದ ಕಾರಣಕ್ಕೆ ಅವರನ್ನು ಗಡಿಪಾರು ಮಾಡುವುದು ಖಂಡನೀಯವಾಗಿದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ […]

ಶಾಲಾ ಕ್ರೀಡೋತ್ಸವದಲ್ಲಿ ಅಜಾನ್ ಕೂಗಿಗೆ ಹಿಂದೂ ವಿದ್ಯಾರ್ಥಿನಿಯರಿಂದ ನಮಾಜ್ ಪ್ರಕರಣ: ಪ್ರತಿಭಟನೆ ನಡೆಸಿದ ಹಿಂಜಾವೇ

ಕುಂದಾಪುರ: ಇಲ್ಲಿನ ಶಂಕರನಾರಾಯಣದಲ್ಲಿ ಮದರ್ ಥೆರೆಸಾ ಸಂಸ್ಥೆಯ ಶಾಲಾ ಕ್ರೀಡೋತ್ಸವ ಸಂದರ್ಭದಲ್ಲಿ ಸ್ವಾಗತ ನೃತ್ಯಕ್ಕೆ ಅಜಾನ್ ಕೂಗಿಗೆ ಹಿಂದೂ ವಿದ್ಯಾರ್ಥಿನಿಯರಿಂದ ನಮಾಜ್ ಮಾಡಿಸಿದ ಪ್ರಕರಣ ಸಾಮಾಜಿಕ ಸಾಮಾಜಿಕ ಜಾಲತಾಣಗಳ ಮೂಲಕ ಬೆಳೆಕಿಗೆ ಬಂದ ಬಳಿಕ, ಸಾರ್ವಜನಿಕರಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಹಿಂದೂ ಜಾಗರಣ ವೇದಿಕೆಯು ಶಾಲೆಯ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ಬುಧವಾರದಂದು ಪ್ರತಿಭಟನೆ ನಡೆಸಿದೆ.

ದುರ್ಗಾ ದೌಡ್ ಗೆ ಸಜ್ಜಾದ ಕೃಷ್ಣ ನಗರಿ: 50 ಸಾವಿರ ಮಿಕ್ಕಿ ಹಿಂದೂ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ

ಉಡುಪಿ: ಹಿಂ.ಜಾ.ವೇ ವತಿಯಿಂದ ಅ.5 ರಂದು ಉಡುಪಿಯಲ್ಲಿ ನಡೆಯಲಿರುವ ದುರ್ಗಾ ದೌಡ್ ಕಾರ್ಯಕ್ರಮಕ್ಕೆ ಭರದ ಸಿದ್ದತೆಗಳು ಜರುಗುತ್ತಿವೆ. ಭೋಪಾಲದ ಸಂಸದೆ, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮಧ್ಯಾಹ್ನ 2 ಗಂಟೆಗೆ ದಿಕ್ಸೂಚಿ ಭಾಷಣ ನೆರವೇರಿಸಲಿದ್ದಾರೆ. ಕಡಿಯಾಳಿ ಮಹಿಷ ಮರ್ದಿನಿ ದೇವಸ್ಥಾನದಿಂದ ಉಡುಪಿ ಕೃಷ್ಣ ಮಠದವರೆಗೆ ಮೆರವಣಿಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ದೂರದ ಊರುಗಳಿಂದ ದುರ್ಗಾ ದೌಡ್ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಕಾರ್ಕಳ, ಕುಂದಾಪುರ, ದ.ಕ ಮುಂತಾದೆಡೆಗಳಿಂದ […]

ಹಿಂ.ಜಾ.ವೇ ಮತ್ತು ಶ್ರೀ ಶನೇಶ್ವರ ಸೇವಾ ಸಮಿತಿ ವತಿಯಿಂದ ಧಾರ್ಮಿಕ ಕಾರ್ಯಕ್ರಮ

ಹಿರಿಯಡ್ಕ: ಹಿಂದು ಜಾಗರಣ ವೇದಿಕೆ ಹಿರಿಯಡ್ಕ ವಲಯ ಮತ್ತು ಶ್ರೀ ಶನೇಶ್ವರ ಸೇವಾ ಸಮಿತಿ ಹಿರಿಯಡ್ಕ ಇವರ ವತಿಯಿಂದ ಹಿಂದೂ ಧಾರ್ಮಿಕ ಕಾರ್ಯಕ್ರಮ ಏಪ್ರಿಲ್ 30 ರಂದು ಶನಿವಾರ ಹಿರಿಯಡ್ಕ ಶ್ರೀ ಕ್ಷೇತ್ರ ವೀರಭದ್ರ ದೇವಸ್ಥಾನದ ಮುಂಬಾಗದಲ್ಲಿ ನಡೆಯಲಿದೆ. ಶ್ರೀ ಶ್ರೀ ಶ್ರೀ ಈಶಪ್ರೀಯ ತೀರ್ಥ ಸ್ವಾಮೀಜಿ ಅದಮಾರು ಮಠ, ಇವರ ದಿವ್ಯ ಉಪಸ್ಥಿತಿಯಲ್ಲಿ ನವಗ್ರಹ ಪೂರ್ವಕ ಶ್ರೀ ಶನಿಶಾಂತಿ ಮಹಾಯಾಗ ನಡೆಯಲಿದೆ. ಬೆಳಗ್ಗೆ 7.30 ಕ್ಕೆ ಗಣಹೋಮ, 8.00 ಕ್ಕೆ ಶನೇಶ್ವರ ಯಾಗ ಪ್ರಾರಂಭ, 11.00 ಗಂಟೆಗೆ […]