ಹಿಂದೂ ದೈವ ದೇವರುಗಳ ಅಪಹಾಸ್ಯ ಖಂಡನೀಯ: ಸಾಮೂಹಿಕ ಪ್ರಾರ್ಥನೆಗೆ ಕೈಜೋಡಿಸಿ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ಇತ್ತೀಚೆಗೆ ಹಿಂದೂ ದೈವ ದೇವರುಗಳನ್ನು ಅಪಹಾಸ್ಯ ಮಾಡುವ ಕೆಟ್ಟ ಪ್ರವೃತ್ತಿ ಮಿತಿ ಮೀರುತ್ತಿದೆ. ಕೊರಗಜ್ಜ ದೈವದ ಪ್ರತಿಕೃತಿಯಂತೆ ವೇಷ ಹಾಕಿ ಕುಣಿದು ವಿಕೃತಿ ಮೆರೆಯುವುದು ಸೇರಿದಂತೆ ಹಿಂದೂಗಳ ಶೃದ್ಧಾ ಕೇಂದ್ರಗಳ ಸಹಿತ ಪುಣ್ಯ ಕ್ಷೇತ್ರಗಳನ್ನು ಉದ್ದೇಶ ಪೂರ್ವಕವಾಗಿ ಅಪವಿತ್ರಗೊಳಿಸುವ ಹುನ್ನಾರ ಹೊಂದಿರುವ ಮತಾಂಧ ದುಷ್ಟ ಶಕ್ತಿಗಳ ಕುಕೃತ್ಯವನ್ನು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತೀವ್ರವಾಗಿ ಖಂಡಿಸಿದ್ದಾರೆ. ಇಂತಹ ಸಮಾಜ ಘಾತುಕ ಶಕ್ತಿಗಳನ್ನು ಸೂಕ್ತ ರೀತಿಯಲ್ಲಿ ಮಟ್ಟ ಹಾಕಿ ಸಾಮಾಜಿಕ ಶಾಂತಿ ಸುವ್ಯವಸ್ತೆಯನ್ನು ಕಾಪಾಡುವಂತೆ […]