ಹೆಮ್ಮಾಡಿ ಆಧ್ಯಾತ್ಮಿಕ ಯೋಗ ಕಲಿಕಾ ಕೇಂದ್ರದ ವಾರ್ಷಿಕೋತ್ಸವ
ಕುಂದಾಪುರ: ನಿರಂತರ ಯೋಗ ಮಾಡುವುದರಿಂದ ಬೌದ್ಧಿಕವಾಗಿ, ಮಾನಸಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಯೋಗಗುರು ಪ್ರವೀಣ್ ಕುಮಾರ್ ಹೆಗ್ಡೆ ತಿಳಿಸಿದರು. ಅವರು ಇತ್ತೀಚೆಗೆ ಆದರ್ಶ ಯುವಕ ಮಂಡಲದಲ್ಲಿ ನಡೆದ ಹೆಮ್ಮಾಡಿ ಆಧ್ಯಾತ್ಮಿಕ ಯೋಗ ಕಲಿಕಾ ಕೇಂದ್ರದ ೬ ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಯೋಗಬಂಧು ರಾಧಾಕೃಷ್ಣ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೇಂದ್ರದ ಅಧ್ಯಕ್ಷೆ ಸುಜಾತ ಅಧ್ಯಕ್ಷತೆವಹಿಸಿ ಯೋಗಕೇಂದ್ರದ ಬಗ್ಗೆ ಹಿತನುಡಿಗಳನ್ನಾಡಿದರು. ಸತೀಶ್ ದೇವಾಡಿಗ ಕೇಂದ್ರದ ಆಯವ್ಯಯ ಮಂಡಿಸಿದರು. ಕೇಂದ್ರದ ಅಧ್ಯಕ್ಷೆ ಹಾಗೂ ಯೋಗ ಶಿಕ್ಷಕಿ […]