ಹೆಮ್ಮಾಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಕಳ್ಳತನ

ಉಡುಪಿ: ಕುಂದಾಪುರ ತಾಲೂಕಿನ ಹೆಮ್ಮಾಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಬಾಗಿಲು ಮುರಿದು ಒಳಪ್ರವೇಶಿಸಿದ ಕಳ್ಳನೋರ್ವ ಕಾಣಿಕೆ ಡಬ್ಬಿಯಲ್ಲಿದ್ದ ನಗದು ದೋಚಿಕೊಂಡು ಪರಾರಿಯಾಗಿದ್ದಾನೆ. ಕಳ್ಳತನದ ದೃಶ್ಯ ದೇವಸ್ಥಾನದಲ್ಲಿ‌ ಅಳವಡಿಸಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೆಲ ತಿಂಗಳ ಹಿಂದಷ್ಟೇ 7 ಕೋಟಿ ವೆಚ್ಚದಲ್ಲಿ ದೇವಸ್ಥಾನ ಜೀರ್ಣೋದ್ದಾರಗೊಂಡಿತ್ತು. ಬಾಗಿಲ ಚಿಲಕದ ಸ್ಕ್ರೂ ತೆಗೆದು ಸುತ್ತು ಪೌಳಿ ಪ್ರವೇಶಿಸಿದ ಕಳ್ಳ, ತಿಂಗಳ ಸತ್ಯನಾರಾಯಣ ಪೂಜೆಗಾಗಿ ಸಂಗ್ರಹಿಸಿದ ಸುಮಾರು 40 ಸಾವಿರಕ್ಕೂ ಅಧಿಕ ಹಣವನ್ನು ಎಗರಿಸಿದ್ದಾನೆ. ಚಪ್ಪಲಿ ಹಾಕಿಕೊಂಡೆ‌ ಕೈ ಮುಗಿದು ಬಳಿಕ ಕಳ್ಳತನ ಕೃತ್ಯ […]