ಎನ್‌ಟಿಎಸ್ ಸಂಸ್ಥೆಯ ಸಮಾಜಮುಖಿ ಕಾರ್ಯ ಶ್ಲಾಘನೀಯ: ಸಿಪಿಐ ಮಂಜಪ್ಪ ಡಿ.ಆರ್
ಕುಂದಾಪುರ: ಹೆಮ್ಮಾಡಿ ಜಂಕ್ಷನ್‌ನಲ್ಲಿ ಅಪಘಾತ ತಡೆಯುವ ನಿಟ್ಟಿನಲ್ಲಿ ಬಗ್ವಾಡಿಯ ಎನ್‌ಟಿಎಸ್ ಕನ್ವೆನ್ಶನ್ ಹಾಲ್ ವತಿಯಿಂದ ಕುಂದಾಪುರ ಪೊಲೀಸ್ ಇಲಾಖೆಗೆ ಬ್ಯಾರಿಕೇಡ್ ಹಸ್ತಾಂತರಿಸಲಾಯಿತು. ಬ್ಯಾರಿಕೇಡ್ ಸ್ವೀಕರಿಸಿ ಮಾತನಾಡಿದ ಕುಂದಾಪುರ ಪೊಲೀಸ್ ವೃತ್ತನಿರೀಕ್ಷಕ ಮಂಜಪ್ಪ ಡಿ.ಆರ್, ಕೊಲ್ಲೂರು ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್ ಆಗಿರುವ ಹೆಮ್ಮಾಡಿಯಲ್ಲಿ ಈ ಹಿಂದೆ ಸಾಕಷ್ಟು ಅಪಘಾತಗಳು ನಡೆದಿತ್ತು. ಅಪಘಾತ ತಡೆಗೆ ಬ್ಯಾರಿಕೇಡ್ ಅಳವಡಿಸಲು ಕೇಳಿಕೊಂಡಾಗ ಎನ್‌ಟಿಎಸ್ ಕನ್ವೆನ್ಶನ್ ಹಾಲ್ ಮಾಲಕರಾದ ತಿಮ್ಮ ಪೂಜಾರಿಯವರು ಹೆಮ್ಮಾಡಿ ಜಂಕ್ಷನ್‌ಗೆ ಆರು ಬ್ಯಾರಿಕೇಡ್‌ಗಳನ್ನು ಉಚಿತವಾಗಿ ನೀಡಿದ್ದಾರೆ. ಸಾರ್ವಜನಿಕರ […]