ಅಮೋನಿಯ ಸೋರಿಕೆ: ಅಸ್ವಸ್ಥಗೊಂಡ ಕಾರ್ಮಿಕರು ಚೇತರಿಕೆ: ಫಿಶ್ ಸ್ಟೊರೇಜ್ ಸ್ಥಗಿತ

ಕುಂದಾಪುರ: ಅಮೋನಿಯಾ ರಾಸಾಯನಿಕ ಸೋರಿಕೆಯಾಗಿ ತೀವ್ರ ಅಸ್ವಸ್ಥಗೊಂಡು ಸೋಮವಾರ ಮುಂಜಾನೆ ಆಸ್ಪತ್ರೆಗೆ ದಾಖಲಾದ ಕಾರ್ಮಿಕರು ಚೇತರಿಸಿಕೊಂಡಿದ್ದು, ಮಂಗಳವಾರ ಮಧ್ಯಾಹ್ನ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇಲ್ಲಿನ ಕಟ್‌ಬೇಲ್ತೂರು ಗ್ರಾಮಪಂಚಾಯತ್ ವ್ಯಾಪ್ತಿಯ ದೇವಲ್ಕುಂದದ ಮಲ್ಪೆ ಫ್ರೆಶ್ ಮರೈನ್ ಮೀನು ಶಿಥಲೀಕರಣ ಘಟಕದಲ್ಲಿ ಸೋಮವಾರ ನಸುಕಿನ ಜಾವದಲ್ಲಿ ಐಸ್ ಫ್ರೀಝ್ ಮಾಡಲು ಕಾರ್ಯಾಚರಿಸುತ್ತಿರುವ ಯಂತ್ರದ ಪೈಪ್‌ನಲ್ಲಿ ಅಮೋನಿಯಾ ರಾಸಾಯನಿಕ ಸೋರಿಕೆಯಾದ ಪರಿಣಾಮ ಮಹಿಳೆಯರ ಹಾಸ್ಟೇಲ್‌ನಲ್ಲಿ ಮಲಗಿದ್ದ ೭೦ಕ್ಕೂ ಅಧಿಕ ಮಂದಿ ಮಹಿಳಾ ಕಾರ್ಮಿಕರು ಅಸ್ವಸ್ಥರಾಗಿದ್ದರು. ಅಸ್ವಸ್ಥಗೊಂಡ ಎಲ್ಲಾ ಕಾರ್ಮಿಕರನ್ನು ಕುಂದಾಪುರದ ಆದರ್ಶ ಆಸ್ಪತ್ರೆಗೆ […]