ಕ್ಯಾನ್ಸರ್ ರೋಗದಿಂದ ಕಂಗಾಲಾಗಿದೆ ಮುದ್ದು ಮುಖದ ಮಗು:ಬೇಕಿದೆ ನಮ್ಮೆಲ್ಲರ ನೆರವು
ಕಳೆದ ಒಂದುವರೆ ವರುಷಗಳಿಂದ ಈ ಮಗು ಕ್ಯಾನ್ಸರ್ ರೋಗದ ವಿರುದ್ದ ಹೊರಾಟಕ್ಕೆ ನಿಂತಿದೆ,ಇಷ್ಟೊತ್ತಿಗೆ ನಾಲ್ಕನೇ ಕ್ಲಾಸಿನಲ್ಲಿ ಕುಳಿತು ತನ್ನ ಸಹಪಾಠಿಗಳೊಂದಿಗೆ ಆಟಪಾಠಗಳಲ್ಲಿ ಭಾಗಿಯಾಗಬೇಕಿದ್ದ ಈ ಮುದ್ದು ಮುಖದ ಕಂದಮ್ಮ ಆಸ್ಪತ್ರೆಯ ಬೆಡ್ಡಿನ ಮೇಲೆ ಮಲಗಿ ಡಾಕ್ಟರು ನರ್ಸುಗಳ ಮುಖ ನೋಡುತ್ತಿದೆ, ಸಹಪಾಠಿಗಳ ಜೊತೆ ಆಟವಾಡುತ್ತ ನಲಿಯಬೇಕಾದ ಈ ಮುದ್ದು ಹುಡುಗಿ ಕ್ಯಾನ್ಸರ್ ಕೂಪದಲ್ಲಿ ನಲುಗಿಹೋಗಿದೆ. ಇದೀಗ ಚಿಕಿತ್ಸೆಗಾಗಿ ಸರಿ ಸುಮಾರು ಮೂವತ್ತೆರಡು ಲಕ್ಷಗಳ ಬೆಟ್ಟದಂತಹ ಮೊತ್ತದ ಅಂದಾಜನ್ನು ಮಾಡುತ್ತಲೇ ಈ ಮಗುವಿನ ತಂದೆ ತಾಯಿ ಕಂಗಾಲಾಗಿ ಕುಳಿತಿದ್ದಾರೆ! […]