ಮದುವೆ ವೇದಿಕೆಯಲ್ಲಿ ಮನೆಕಟ್ಟಲು ನೆರವು ನೀಡಿದ ಟ್ರಾಫಿಕ್ ಪೊಲೀಸ್
ಮಂಗಳೂರು: ಮದುವೆ ದಿನ ಬಡವ್ಯಕ್ತಿಗೆ ಮನೆ ಕಟ್ಟಲು ಆರ್ಥಿಕ ನೆರವು ನೀಡಿದ ಟ್ರಾಫಿಕ್ ಪೊಲೀಸ್ ಒಬ್ಬರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಇಲ್ಲಿನ ಟ್ರಾಫಿಕ್ ಪೊಲೀಸ್ ರೋಹಿತ್ ಕುಲಾಲ್ ಅವರ ಮದುವೆ ನಡೆದಿತ್ತು. ತನ್ನ ಮದುವೆ ಕಾರ್ಯಕ್ರಮದಲ್ಲಿ ಬಡವರಿಗೆ ಸಹಾಯ ಮಾಡಬೇಕು ಅಂತ ಅಭಿಲಾಷೆ ಹೊಂದಿದ್ದ ಅವರು ಇಲ್ಲಿನ ಕೇನ್ಯಾ ಗ್ರಾಮದ ನಿವಾಸಿ ಲಿಂಗು ಎಂಬುವರಿಗೆ ಮನೆ ಕಟ್ಟಲು ಮದುವೆ ಮಂಟಪದಲ್ಲಿ 25 ಸಾವಿರ ರೂ. ನೀಡಿದ್ದಾರೆ. ಅಲ್ಲದೇ ಮನೆ ಕಟ್ಟಲು ಬೇಕಾದ […]
ಮನೆ ನಿರ್ಮಾಣಕ್ಕೆ ಸಹಾಯಧನ
ಉಡುಪಿ, ಜೂನ್ 1: 2018-19 ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯಡಿ 120 ಗುರಿಯನ್ನು ನಿಗಧಿಪಡಿಸಲಾಗಿದ್ದು, ಹೊಸ ಮನೆ ನಿರ್ಮಿಸಲು ಸಹಾಯಧನಕ್ಕಾಗಿ ಉಡುಪಿ ನಗರಸಭಾ ವ್ಯಾಪ್ತಿಯ ಸ್ವಂತ ನಿವೇಶನ ಹೊಂದಿರುವ ವಸತಿ ರಹಿತರು ಮನೆ ನಿರ್ಮಿಸಲು ಸಹಾಯಧನ ಪಡೆಯಬಹುದಾಗಿದೆ. ಆಸಕ್ತರು ಸಂಬಂಧಿಸಿದ ಸೂಕ್ತ ದಾಖಲೆಗಳೊಂದಿಗೆ ಜೂನ್ 30 ರ ಒಳಗೆ ನಗರಸಭಾ ಕಚೇರಿಗೆ ಅರ್ಜಿ ಸಲ್ಲಿಸಿ, ಇದರ ಸದುಪಯೋಗ ಪಡೆದುಕೊಳ್ಳುವಂತೆ ನಗರಸಭಾ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.