ಅಪಘಾತದಲ್ಲಿ ಕಾಲು ಕಳೆದುಕೊಂಡ ಯುವಕನ ಬಾಳಿಗೆ ದಾರಿಯಾಗಿ: ಕನಸುಕಂಗಳ ಯುವಕನಿಗೆ ಬೇಕಿದೆ ನಿಮ್ಮ ನೆರವು
ಉಡುಪಿ: ಎಲ್ಲಾ ಯುವಕರಂತೆ ಆತನಿಗೂ ಬದುಕಿನಲ್ಲಿ ನೂರಾರು ಕನಸುಗಳಿತ್ತು. ಅದನ್ನು ಸಕಾರಗೊಳಿಸುವ ಸಲುವಾಗಿ ರಾತ್ರಿ-ಹಗಲಿನ ಪರಿವಿಲ್ಲದೆ ನಿಂತಲ್ಲಿ ನಿಲ್ಲದೆ, ಕುಳಿತಲ್ಲಿ ಕೂರದೆ ಕಾಲಿಗೆ ಚಕ್ರಕಟ್ಟಿಕೊಂಡವನಂತೆ ಶಾಮಿಯಾನ, ಲೈಟಿಂಗ್ ಹೀಗೆ ಹಲವಾರು ಕೆಲಸಗಳಲ್ಲಿ ಮೈಮುರಿದು ದುಡಿಯುತ್ತಿದ್ದ. ರಜೆ ಎಂದು ಒಂದು ದಿನ ಕೂಡ ಮನೆಯಲ್ಲಿ ಕುಳಿತುಕೊಳ್ಳುವ ಜಾಯಮಾನ ಆತನದ್ದಾಗಿರಲಿಲ್ಲ. ಆದರೆ ಈಗ ವಿಧಿಯಾಟವೇ ಬೇರೆಯಾಗಿದೆ. ಕಾಲಿಗೆ ಚಕ್ರಕಟ್ಟಿಕೊಂಡವನಂತೆ ಓಡಾಡುತ್ತಿದ್ದ ಯುವಕನ ಒಂದು ಕಾಲು ಅಪಘಾತದಿಂದಾಗಿ ಕತ್ತರಿಸಲ್ಪಟ್ಟಿದೆ. ಬದುಕಿನ ಬಗ್ಗೆ ನೂರು ಕನಸುಗಳನ್ನು ಹೊಂದಿದವನು ಮುಂದೇನು ಎನ್ನುವ ಚಿಂತೆಯಲ್ಲಿ ಆಸ್ಪತ್ರೆಯ […]