ಹೆಬ್ರಿ: ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಗುರುವಂದನಾ ಕಾರ್ಯಕ್ರಮ
ಹೆಬ್ರಿ: ವ್ಯಕ್ತಿಗಳಲ್ಲಿ ಮಾತೇ ಸಾಧನೆ ಆಗಬಾರದು ಸಾಧನೆಯೇ ಮಾತಾಗಬೇಕು. ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಅನೇಕ ಸಾಧಕರನ್ನು ಗುರುತಿಸಿ ಕೇಂದ್ರ ಸರ್ಕಾರ ಇಂದು ಪ್ರಶಸ್ತಿಯನ್ನು ನೀಡುತ್ತಿದೆ. ಎಲೆ ಮರೆಯ ಕಾಯಿಯಂತೆ ಶ್ರದ್ಧೆಯಿಂದ ಕೆಲಸವನ್ನು ಮಾಡಿ ನಿವೃತ್ತಿಯಾದ ರಘುಪತಿ ಕಲ್ಕೂರ್ ಇವರನ್ನು ಗುರುತಿಸಿ ಗೌರವಿಸಿದ ಎಸ್.ಆರ್ ಶಿಕ್ಷಣ ಸಂಸ್ಥೆಯ ಈ ಕಾರ್ಯವನ್ನು ಶ್ಲಾಘಿಸುತ್ತೇನೆ. ರಘುಪತಿ ಕಲ್ಕೂರ್ ಅವರು ವೃತ್ತಿಯಲ್ಲಿ ಎದುರಾದ ಅನೇಕ ಸವಾಲುಗಳನ್ನು ಎದುರಿಸಿ ಮಕ್ಕಳ ಬದುಕಿಗಾಗಿ ಶ್ರಮಿಸಿದವರು. ಶಿಕ್ಷಕರು ಹೇಳುವ ಮಾತುಗಳನ್ನು ಶ್ರದ್ಧೆಯಿಂದ ಕೇಳಿ ಮಕ್ಕಳು […]