ಸಾರ್ವಜನಿಕರ ಮನೆ ಬಾಗಿಲಿಗೇ ಪಿಂಚಣಿ- ಸಚಿವ ಅಶೋಕ್: ಹೆಬ್ರಿ ತಾಲೂಕಿನಲ್ಲಿ ಮಿನಿ ವಿಧಾನಸೌಧದ ಶಿಲಾನ್ಯಾಸ ನೆರವೇರಿಸಿದ ಸಚಿವ
ಉಡುಪಿ: ವೃದ್ದಾಪ್ಯ ವೇತನ , ವಿಧವಾ ವೇತನದ ಪಿಂಚಣಿಗೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸದೇ , ಸರಕಾರದ ವತಿಯಿಂದಲೇ ಪಿಂಚಣಿಗೆ ಅರ್ಹರಾದವನ್ನು ಗುರುತಿಸಿ ಅವರ ಮನೆ ಬಾಗಿಲಿಗೇ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಅವರು ಭಾನುವಾರ, ಹೆಬ್ರಿ ತಾಲೂಕಿನಲ್ಲಿ 10 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌಧದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ರಾಜ್ಯದಲ್ಲಿ ಪ್ರತಿ ವರ್ಷ ವೃದ್ದಾಪ್ಯ ವೇತನ , ವಿಧವಾ ವೇತನ ಮುಂತಾದ ಪಿಂಚಣಿ ಯೋಜೆನಗಳಿಗಾಗಿ 7000 ಕೋಟಿ ರಊ […]