ಹೆಬ್ರಿ: ಮಳೆಗೆ ನೀರಿಗೆ ಕೊಚ್ಚಿ ಹೋಗಿದ್ದ ವೃದ್ಧೆಯ ಮೃತದೇಹ ಪತ್ತೆ
ಉಡುಪಿ: ಹೆಬ್ರಿ ತಾಲೂಕಿನ ಮುದ್ರಾಡಿಯಲ್ಲಿ ನಿನ್ನೆ ಮೇಘಸ್ಪೋಟದ ಮಾದರಿಯಲ್ಲಿ ಏಕಾಏಕಿ ಸುರಿದ ಮಳೆಗೆ ಕೊಚ್ಚಿ ಹೋಗಿದ್ದ ವೃದ್ಧೆಯ ಮೃತದೇಹ ಇಂದು ಪತ್ತೆಯಾಗಿದೆ.ಮೃತರನ್ನು ಚಂದ್ರ ಗೌಡ್ತಿ (85) ಎಂದು ಗುರುತಿಸಲಾಗಿದೆ. ಧಾರಾಕಾರವಾಗಿ ಸುರಿದ ಮಳೆಗೆ ಮುದ್ರಾಡಿಯ ಬಲ್ಲಾಡಿಯಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಮಳೆ ನೀರಿನ ರಭಸಕ್ಕೆ ಚಂದ್ರ ಗೌಡ್ತಿ ಕೊಚ್ಚಿ ಹೋಗಿದ್ದರು. ನಿನ್ನೆ ರಾತ್ರಿಯವರೆಗೂ ಪತ್ತೆಯಾಗಿರಲಿಲ್ಲ. ಇಂದು ಮುಂಜಾನೆ ಬಲ್ಲಾಡಿ ಪರಿಸರದ ಗದ್ದೆ ಬದಿಯಲ್ಲಿ ಮೃತದೇಹ ಪತ್ತೆಯಾಗಿದೆ.ಭಾನುವಾರ ಮಧ್ಯಾಹ್ನ 3ಗಂಟೆಯಿಂದ 5ಗಂಟೆಯವರೆಗೆ ಧಾರಾಕಾರ ಮಳೆ ಸುರಿದಿದ್ದು, ವ್ಯಾಪಕ ಮಳೆಗೆ […]